Advertisement

Modi ಉಪನಾಮ ಪ್ರಕರಣ: ಕ್ಷಮೆಯಾಚಿಸಲ್ಲ ಎಂದ ರಾಹುಲ್‌ ಗಾಂಧಿ

11:51 PM Aug 02, 2023 | Team Udayavani |

ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ನಾನು ತಪ್ಪಿಸ್ಥನಲ್ಲ ಹಾಗಾಗಿ ಈ ಸಂಬಂಧಿಸಿದಂತೆ ಕ್ಷಮೆ ಯಾಚಿಸುವುದೂ ಇಲ್ಲವೆಂದು ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ರಾಹುಲ್‌ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿದ್ದಾರೆ.

Advertisement

ಪ್ರಕರಣದಲ್ಲಿ ರಾಹುಲ್‌ ದೋಷಿ ಎಂದು ಗುಜರಾತ್‌ ನ್ಯಾಯಾಲಯ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಕೋರಿ ರಾಹುಲ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೇ, ಈ ಸಂಬಂಧಿಸಿದ ಅಫಿಡವಿಟ್‌ ಅನ್ನೂ ಸಲ್ಲಿಸಿದ್ದಾರೆ. ಈ ವೇಳೆ ತಾನು ಪ್ರಕರಣದಲ್ಲಿ ಕ್ಷಮೆಯಾಚಿಸಿ ಖುಲಾಸೆ ಮಾಡಿಕೊಳ್ಳಬೇಕಿದಿದ್ದರೆ, ಅದನ್ನು ಯಾವತ್ತೋ ಮಾಡಿರುತ್ತಿದ್ದೆ. ಆದರೆ, ನಾನು ದೋಷಿಯೇ ಅಲ್ಲ, ಹಾಗಿದ್ದಾಗ ಕ್ಷಮೆಯಾಚಿಸುವುದೂ ಇಲ್ಲ ಎಂದು ಹೇಳಿದ್ದಾರೆ.

ಜತೆಗೆ ಮೋದಿ ಎಂಬ ಸಮುದಾಯಕ್ಕೆ ನನ್ನ ಮಾತಿಂದ ನೋವುಂಟಾಗಿದೆ ಎಂಬುದು ಸಮಂಜಸವಲ್ಲ, ಕಾರಣ ಮೋದಿ ಎನ್ನುವ ಸಮುದಾಯವೇ ಇಲ್ಲ. ಇರುವುದು ಮೋದಿ ವನಿಕ ಸಮಾಜ್‌ ಹಾಗೂ ಮೋದಿ ಘಂಚಿ ಸಮಾಜ್‌ ಮಾತ್ರ ಎಂಬುದಾಗಿಯೂ ರಾಹುಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next