ರಾಂಚಿ: ಮೋದಿಯವರ ಮನೆತನದ ಹೆಸರಿಗೆ ಸಂಬಂಧಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಯವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ, ತಾನು ಈ ಹಿಂದೆ ನೀಡಿದ್ದ ತಡೆಯಾಜ್ಞೆಯ ಅವಧಿಯನ್ನು ರಾಂಚಿ ಹೈಕೋರ್ಟ್ ಮುಂದುವರಿಸಿದೆ.
ಬುಧವಾರ ಹೊರಬಿದ್ದ ಆದೇಶದ ಪ್ರಕಾರ, ತಡೆಯಾಜ್ಞೆ ಡಿ.7ರವರೆಗೆ ಜಾರಿಯಲ್ಲಿರಲಿದೆ. ಪ್ರಕರಣವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿಯವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಮಾನ್ಯ ಮಾಡದ ನ್ಯಾಯಾಲಯ ತಡೆಯಾಜ್ಞೆಯ ಅವಧಿಯನ್ನು ಮುಂದುವರಿಸಿತು.
2019ರ ಮಹಾಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ, ಪಿಎನ್‌ಬಿ ಹಗರಣದ ಆರೋಪಿ ನೀರವ್ ಮೋದಿಯವರ ಬಗ್ಗೆ ಮಾತನಾಡುತ್ತಾ, “ಎಲ್ಲಾ ಕಳ್ಳರೇಕೆ ಮೋದಿ ಎಂಬ ಹೆಸರನ್ನಿಟ್ಟುಕೊಂಡಿರುತ್ತಾರೆ’ ಎಂದು ಪ್ರಶ್ನಿಸಿದ್ದರು. ಹಾಗಾಗಿ, ರಾಂಚಿ ಹೈಕೋರ್ಟ್‌ನಲ್ಲಿ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ದುಬೈನಲ್ಲಿ ಅನುಷ್ಕಾ ಫ್ಯಾಮಿಲಿ ಔಟಿಂಗ್