Advertisement
ಮೋದಿ ಅವರ ಈ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ವಿದೇಶಿ ಪತ್ರಕರ್ತರೊಬ್ಬರು ಚೀನ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್ ಅವರಿಗೆ ಕೇಳಿದ್ದರು. “ಮೋದಿ ಅವರ ಭಾಷಣವನ್ನು ನಾನೂ ಕೇಳಿದೆ. ಭಾರತ- ಚೀನ ನೆರೆಹೊರೆಯ ನಿಕಟವರ್ತಿಗಳು. ಒಂದು ಶತಕೋಟಿಗೂ ಹೆಚ್ಚು ಜನರನ್ನು ಹೊಂದಿರುವ ರಾಷ್ಟ್ರಗಳು. ಉಭಯ ರಾಷ್ಟ್ರಗಳ ಜನರ ಹಿತಾಸಕ್ತಿ ಮಾತ್ರವಲ್ಲದೆ, ಶಾಂತಿ, ಸ್ಥಿರತೆ ಕಾಪಾಡುವುದು, ಪರಸ್ಪರ ಅಭಿವೃದ್ಧಿಗೆ ಕೈಜೋಡಿಸುವುದು ಇಡೀ ಜಗತ್ತಿಗೆ ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.
ಗಡಿನಕ್ಷೆ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ನೇಪಾಲ ನಡುವೆ ಉನ್ನತ ರಾಜತಾಂತ್ರಿಕ ಮಟ್ಟದ ಸಭೆ ಸೋಮವಾರ ನಡೆಯಿತು. ಭೂಕಂಪದಿಂದ ತತ್ತರಿಸಿರುವ ನೇಪಾಲದ ಗೋರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಭಾರತದ ಆರ್ಥಿಕ ನೆರವಿನೊಂದಿಗೆ 46,031 ಮನೆಗಳನ್ನು ಮರುನಿರ್ಮಿಸಲಾಗುತ್ತಿದೆ. ಕ್ರಾಸ್ ಬಾರ್ಡರ್ ಪೆಟ್ರೋಲಿಯಂ ಪೈಪ್‌ಲೈನ್ ಅನ್ನೂ ನಿರ್ಮಿಸಲಾಗುತ್ತಿದೆ. ಇವುಗಳೊಂದಿಗೆ ವಿವಿಧ ಕಾಮಗಾರಿಗಳ ಸಮಗ್ರ ಪರಿಶೀಲನೆಯನ್ನು ಭಾರತ ನಡೆಸಿತು. ಕೋವಿಡ್ ಸಂದರ್ಭದಲ್ಲಿ ಭಾರತ ನೀಡಿದ ವೈದ್ಯಕೀಯ ನೆರವನ್ನು ನೇಪಾಲ ಸ್ಮರಿಸಿತು. ನೇಪಾಲದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ, ನೇಪಾಲದ ವಿದೇಶಾಂಗ ಕಾರ್ಯದರ್ಶಿ ಶಂಕರ್‌ದಾಸ್ ಬೈರಗಿ ಸಭೆಯ ನೇತೃತ್ವ ವಹಿಸಿದ್ದರು.