ಮೈಸೂರು : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿ ಸರ್ಕಾರದಲ್ಲಿ ಅಭದ್ರತೆ ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹೇಳಿಕೆ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಶಾಕ್ ನೀಡಿದ್ದಾರೆ.
ಬಿಜೆಪಿ, ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ,ಜೆಡಿಎಸ್ ನಾಯಕರೆಲ್ಲರೂ ಆರೋಪಿಸುತ್ತಿರುವ ಬೆನ್ನಲ್ಲೆ ಸಚಿವ ಜಿ.ಟಿ.ದೇವೇಗೌಡ ಅವರು ಮಂಗಳವಾರ ಈ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಅಭದ್ರತೆ ಸೃಷ್ಟಿಸುವ ಕೆಲಸಕ್ಕೆ ಮೋದಿ, ಅಮಿತ್ ಶಾ ಅವರು ಕೈ ಹಾಕಿಲ್ಲ.ಅವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಕಾಶ್ಮೀರ ವಿಚಾರ, ಚೀನಾ ,ಅಮೆರಿಕಾದೊಂದಿಗಿನ ವಿಚಾರಗಳಲ್ಲಿ ಏನು ಮಾಡಬೇಕೆಂದು ಕೆಲಸ ಮಾಡುತ್ತಿದ್ದಾರೆ. ಜುಲೈ 5 ರಂದು ರೈತರ ಪರ ಬಜೆಟ್ ನೀಡುವುದಾಗಿ ಹೇಳಿದ್ದು, ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ಮೊದಲೆ ತಿಳಿದಿತ್ತು ಆದರೆ ಪಾಪ, ಆನಂದ್ ಸಿಂಗ್‌ಗೆ ಏನು ಕಷ್ಟವಿತ್ತೋ ,ಅದನ್ನು ಕಾಂಗ್ರೆಸ್ ನಾಯಕರು ಸರಿ ಮಾಡುತ್ತಾರೆ ಎಂದರು.