Advertisement

ಮಾಸಾಂತ್ಯಕ್ಕೆ ಮೋದಿ, ಶಾ ಭೇಟಿ: ಬಿಎಸ್‌ವೈ

10:59 PM Dec 18, 2019 | Team Udayavani |

ಹುಬ್ಬಳ್ಳಿ: ಪಕ್ಷಕ್ಕೆ ಬೆಂಬಲ ಕೊಟ್ಟು ಉಪಚುನಾವಣೆಯಲ್ಲಿ ಗೆದ್ದಿರುವ ಎಲ್ಲ 12 ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬಂದು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರನ್ನೆಲ್ಲ ಸಚಿವರನ್ನಾಗಿ ಮಾಡಲಾಗುವುದೆಂದು ಪಕ್ಷದ ಮುಖಂಡರು ಭರವಸೆ ಕೊಟ್ಟಿದ್ದಾರೆ.

Advertisement

ಹೀಗಾಗಿ, ತಿಂಗಳಾಂತ್ಯದಲ್ಲಿ ಪ್ರಧಾನಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಮೇಲೆ ಅವರ ಭರವಸೆ ಈಡೇರಿಸುತ್ತೇವೆ ಎಂದರು. ಪ್ರಧಾನಿ ಮೋದಿ ಜ.2ರಂದು ಬೆಂಗಳೂರಿಗೆ ಬಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 3ರಂದು ಬೃಹತ್‌ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದನ್ನು ತುಮಕೂರು ಇಲ್ಲವೆ ಬೇರೆಡೆ ಮಾಡಬೇಕೆಂಬ ಚರ್ಚೆ ನಡೆದಿದೆ. ಆ ಕುರಿತು ಪ್ರಧಾನಿ ಕಚೇರಿ ಸಂಪರ್ಕದಲ್ಲಿದ್ದು, ಅಂತಿಮವಾಗಿ ಕಾರ್ಯಕ್ರಮ ಸ್ಥಳ ನಿಗದಿಪಡಿಸಲಾಗುವುದು ಎಂದರು.

ಬಿಎಸ್‌ವೈ ಕಾರ್ಯಕ್ರಮದಲ್ಲಿ “ರಾಜಾ ಹುಲಿ’ ಸದ್ದು: ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಬುಧವಾರ ಯಡಿಯೂರಪ್ಪ ಅವರಿದ್ದ ಕಾರ್ಯಕ್ರಮದಲ್ಲಿ ಮತ್ತೆ “ಹುಲಿಯಾ’ ಕೂಗು ಕೇಳಿ ಬಂತು. ಆದರೆ, ಈ ಸಲ “ಹೌದು ಹುಲಿಯಾ’ ಬದಲು ಅದು “ರಾಜಾ ಹುಲಿ’ ಎಂದಾಗಿತ್ತು. ಕಾರ್ಯಕ್ರಮದಲ್ಲಿ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಭಾಷಣ ಮಾಡುವಾಗ, ಚನ್ನಬಸಪ್ಪ ಜಂಬಗಿ ಎಂಬಾತ ಕುಡಿದ ಅಮಲಿನಲ್ಲಿ “ರಾಜಾ ಹುಲಿ..ರಾಜಾ ಹುಲಿ’ ಎಂದು ಕೂಗು ಹಾಕಿದ. ಆಗ, ಮುನೇನಕೊಪ್ಪ ಅವರು, ನಮ್ಮ ಅಭಿಮಾನಿ ಹೋಗಲಿ ಬಿಡು ಎಂದು ಸಮಾಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next