Advertisement

ಮೋದಿ ದುರ್ಯೋಧನ, ಅಮಿತ್‌ ಶಾ ದುಶ್ಶಾಸನ: ಮಮತಾ ಬ್ಯಾನರ್ಜಿ ಗುಡುಗು

09:05 AM Apr 10, 2019 | Sathish malya |

ಕೋಲ್ಕತ : ದೇಶದ ಹಾಲಿ ರಾಜಕಾರಣದಲ್ಲಿ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಮಹಾಭಾರತದಲ್ಲಿ ಪಾಂಡವರ ವಿರುದ್ಧ ಹೋರಾಡಿದ ದುರ್ಯೋಧನ ಮತ್ತು ದುಶ್ಶಾಸನ ರಾಗಿದ್ದಾರೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಭಾನುವಾರದ ರಾಲಿಯಲ್ಲಿ ಭಾಷಣ ಮಾಡಿದ ಮರುದಿನವೇ ಇಂದು ಸೋಮವಾರ ಕೂಚ್‌ ಬೆಹಾರ್‌ ನಲ್ಲಿ ಏರ್ಪಡಿಸಲಾದ ರಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಮೋದಿ ಮತ್ತು ಶಾ ಅವರೇ ನೀವು ರಾಜ್ಯದಲ್ಲಿನ ನಮ್ಮ ಕಾರ್ಯ ನಿರ್ವಹಣೆಯನ್ನು ಪ್ರಶ್ನಿಸುತ್ತಿದ್ದೀರಿ. ಕೇಂದ್ರದಲ್ಲಿ ನಿಮ್ಮ ಕಾರ್ಯ ನಿರ್ವಹಣೆಯನ್ನು ನೀವು ಎಂದಾದರೂ ಅವಲೋಕಿಸಿದ್ದೀರಾ ? ನಾನು ನನ್ನ ಈ ರಾಜ್ಯದಲ್ಲಿ ಮಾಡಿರುವ ಕೆಲಸಗಳ ಒಂದು ಪರ್ಸೆಂಟ್‌ ಕೆಲಸವನ್ನೂ ನೀವು ಕೇಂದ್ರದಲ್ಲಿ ಮಾಡಿಲ್ಲ’ ಎಂದು ಗುಡುಗಿದರು.

ಪ್ರಧಾನಿ ಮೋದಿ ಅವರು ನಿನ್ನೆ ತಮ್ಮ ಭಾಷಣದಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದಿದ್ದ ಕೋಟ್ಯಂತರ ರೂ.ಗಳ ಚಿಟ್‌ ಫ‌ಂಡ್‌ ಹಗರಣವನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ ಮಮತಾ, “ಮೋದಿ ಅವರೇ ನೀವು ಬಡಜನರಿಗೆ ಕೊಡುವುದಾಗಿ ಹೇಳಿದ್ದ ಹಣ ಎಂದೂ ಅವರಿಗೆ ಸಂದಿಲ್ಲ; ಅದೆಲ್ಲ ಎಲ್ಲಿ ಹೋಯಿತು ?’ ಎಂದು ಕೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ ಮಮತಾ, ಟಿಎಂಸಿ ವಿರುದ್ಧ ಪದೇ ಪದೇ ಆರೋಪಿಲಾಗುತ್ತಿರುವ ರಾಜಕೀಯ ಹಿಂಸೆಯನ್ನು ಸಾರಾಸಗಟು ಅಲ್ಲಗಳೆದರು.

Advertisement

Udayavani is now on Telegram. Click here to join our channel and stay updated with the latest news.

Next