Advertisement

ಮೋದಿಗೆ ಯುಎಇ ಪುರಸ್ಕಾರ

11:32 PM Apr 04, 2019 | mahesh |

ದುಬಾೖ: ಯುಎಇ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ಝಾಯೆದ್‌ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಉಭಯ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ಮೋದಿ ವಹಿಸಿದ್ದು, ಈ ಸಾಧನೆಗೆ ಅವರನ್ನು ಪುರಸ್ಕರಿಸಲಾಗುತ್ತಿದೆ ಎಂದು ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೇದ್‌ ಅಲ್‌ ನಹ್ಯನ್‌ ಘೋಷಿಸಿದ್ದಾರೆ. ಈ ಪುರಸ್ಕಾರವನ್ನು ರಾಜರು, ದೇಶದ ಅಧ್ಯಕ್ಷರು ಮತ್ತು ಪ್ರಧಾನಿಗಳಿಗೆ ನೀಡಲಾಗುತ್ತದೆ.

Advertisement

ಭಾರತದೊಂದಿಗೆ ನಾವು ಐತಿಹಾಸಿಕ ಸಂಬಂಧ ಹೊಂದಿದ್ದು, ಪ್ರಧಾನಿ ಮೋದಿ ಇದನ್ನು ಇನ್ನಷ್ಟು ಬಲಗೊಳಿಸಿದ್ದಾರೆ ಎಂದು ಅಧ್ಯಕ್ಷ ಶೇಖ್‌ ಖಲೀಫಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಈ ಗೌರವವನ್ನು ಅತ್ಯಂತ ವಿನಯತೆಯಿಂದ ಸ್ವೀಕರಿಸುತ್ತಿದ್ದು, ಗೌರವಾನ್ವಿತ ದೊರೆಗಳಾದ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌’ರಿಗೆ ಧನ್ಯವಾದಗಳು ಎಂದಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಪ್ರಧಾನಿ ಮೋದಿಯವರಿಗೆ ಈ ಪುರಸ್ಕಾರ ವನ್ನು ಯುಎಇ ಘೋಷಿಸಿರುವುದು ಅತ್ಯಂತ ಖುಷಿಯ ಸಂಗತಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next