Advertisement
ನರೇಂದ್ರ ಮೋದಿಯವರ ಜತೆಗೆ ಯಾವ ನಾಯಕರೆಲ್ಲ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬುದು ಇನ್ನಷ್ಟೆ ಅಂತಿಮಗೊಳ್ಳಬೇಕಾಗಿದೆ. ಸುಮಾರು 40 ಗಿ 30 ಅಡಿ ವಿಸ್ತೀರ್ಣದ ವೇದಿಕೆ ನಿರ್ಮಾಣ ಕೆಲಸ ನಡೆದಿದೆ. ಮೈದಾನ ಒಂದು ಲಕ್ಷ ಮಂದಿಯ ಸಾಮರ್ಥ್ಯ ಹೊಂದಿದೆ. ಸದ್ಯ ಬೀಡಿನಗುಡ್ಡೆ ಬಯಲು ರಂಗಮಂದಿರ ಹೊರತು ಪಡಿಸಿದರೆ ಉಡುಪಿ ಕೇಂದ್ರ ಭಾಗದಲ್ಲಿ ಲಭ್ಯವಿರುವ ದೊಡ್ಡ ಮೈದಾನವೆಂದರೆ ಎಂಜಿಎಂ ಮೈದಾನ ಮಾತ್ರ. ಈ ಬಾರಿ ಉಡುಪಿಯಲ್ಲಿ ಜರಗಿದ ಧರ್ಮಸಂಸದ್ ಸಂದರ್ಭದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕೂಡ ಇದೇ ಮೈದಾನದಲ್ಲಿ ನಡೆದಿತ್ತು. ಮೋದಿ ಸಮಾವೇಶಕ್ಕೆ 10,000ದಷ್ಟು ಬೈಕ್ ಮತ್ತು 2,000ದಷ್ಟು ಕಾರುಗಳಲ್ಲಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ನೀತಿ ಸಂಹಿತೆ ಪಾಲಿಸಬೇಕಾಗಿರುವುದರಿಂದ ಯಾವುದೇ ರ್ಯಾಲಿ ಹಮ್ಮಿಕೊಂಡಿಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದ್ದಾರೆ.1992ರಲ್ಲಿ ಉಡುಪಿಗೆ ಮೋದಿ ಪ್ರಥಮ ಭೇಟಿ
ಉಡುಪಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಥಮ ಬಾರಿಗೆ ಮೇ 1ರಂದು ಭೇಟಿ ನೀಡುತ್ತಿದ್ದರೆ ಇದಕ್ಕೂ ಹಿಂದೆ 3 ಬಾರಿ ಆಗಮಿಸಿದ್ದರು. 1992ರಲ್ಲಿ ಉಡುಪಿಗೆ ಬಂದದ್ದು ಪ್ರಥಮ ಬಾರಿ. ಆಗ ಲಾಲ್‌ಕೃಷ್ಣ ಆಡ್ವಾಣಿ ಅವರ ರಥಯಾತ್ರೆ ಸಂಯೋಜನೆಗಾಗಿ ನರೇಂದ್ರ ಮೋದಿ ಕರಾವಳಿಗೆ ಭೇಟಿ ಕೊಟ್ಟರು. ಮೋದಿ ಅಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ರಥಯಾತ್ರೆ ಪೂರ್ವತಯಾರಿ ಸಭೆ ನಡೆದದ್ದು ಡಾ| ವಿ.ಎಸ್. ಆಚಾರ್ಯರ ಮನೆಯಲ್ಲಿ. ನಾಯಕರಾದ ಡಾ|ವಿ.ಎಸ್. ಆಚಾರ್ಯ, ಯೋಗೀಶ ಭಟ್, ಮೋನಪ್ಪ ಭಂಡಾರಿ, ಕೃಷ್ಣಾನಂದ ಕಾಮತ್, ಕೈಯೂರು ನಾರಾಯಣ ಭಟ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಡೆದ ಬಳಿಕ ಡಾ| ಆಚಾರ್ಯರ ಮನೆ ಆವರಣದಲ್ಲಿ ಚಿತ್ರವನ್ನು ತೆಗೆಯಲಾಯಿತು.
ಶೇಖರ ಭಟ್, ಪ. ವಸಂತ ಭಟ್, ಪಂಢರೀನಾಥ ಭಟ್, ಶ್ಯಾಮಲಾ ಪಂಢರೀನಾಥ ಭಟ್, ಮೋಹನ ಉಪಾಧ್ಯ, ರಾಮಚಂದ್ರ ಆಚಾರ್ಯ ಮೊದಲಾದವರು ಪಾಲ್ಗೊಂಡಿದ್ದೆವು ಎಂದು ಎರಡೂ ಸಭೆಯಲ್ಲಿದ್ದ ಉಡುಪಿಯ ಹಿರಿಯ ಕಾರ್ಯಕರ್ತ ಗುಜ್ಜಾಡಿ ಪ್ರಭಾಕರ ನಾಯಕ್ ನೆನಪಿಸಿಕೊಳ್ಳುತ್ತಾರೆ. ಮೋದಿ 2004ರಲ್ಲಿ ಚಿತ್ತರಂಜನ್ ಸರ್ಕಲ್, 2008ರಲ್ಲಿ ಮಲ್ಪೆ ಕಡಲ ತೀರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.