Advertisement
ಭಾರತ ಮತ್ತು ಪೋಲೆಂಡ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ ಪೋಲೆಂಡ್‌ನ ವಾರ್ಸಾಗೆ ಅವರ ಭೇಟಿ ಮಹತ್ವ ಪಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದು ಇಲ್ಲಿನ ವಿವಿಧ ಕಾರ್ಯಕ್ರಮಗಳ ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ ಪೋಲೆಂಡ್ ಸ್ನೇಹ ಬಲಪಡಿಸುತ್ತದೆ ಮತ್ತು ಉಭಯ ರಾಷ್ಟ್ರಗಳ ಜನರಿಗೆ ಪ್ರಯೋಜನ ಸಿಗಲಿದೆ ಎಂದು ಬರೆದಿದ್ದಾರೆ.
ಪೋಲೆಂಡ್‌ನಲ್ಲಿ ಭಾರತೀಯ ವಲಸಿಗರು ಪ್ರಧಾನಿ ಮೋದಿ ಆಗಮನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಪೋಲೆಂಡ್‌ನ ಕಲಾವಿದರು ವಾರ್ಸಾ ಹೋಟೆಲ್ನಲ್ಲಿ ಭಾರತೀಯ ಸಾಂಪ್ರದಾಯಿಕ ನೃತ್ಯದ ಮೂಲಕ ಮೋದಿಗೆ ಸ್ವಾಗತ ನೀಡಿದರು.
ವಾರ್ಸಾದ ಹೋಟೆಲ್ ಎದುರು ಮೋದಿ ನೋಡಲು ಅನಿವಾಸಿ ಭಾರತೀಯರು ಸೇರಿದ್ದರು. ಮೋದಿ ಆಗಮಿಸುತ್ತಿದ್ದಂತೆ ಅವರು ಜೈಕಾರ ಹಾಕಿ ಸಂತಸ ವ್ಯಕ್ತಪಡಿಸಿದರು. 1979ರಲ್ಲಿ ಮೊರಾರ್ಜಿ ದೇಸಾಯಿ ನಂತರ 45 ವರ್ಷಗಳಲ್ಲಿ ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ. ರಕ್ಷಣಾ ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನ, ಔಷಧೀಯ ಮತ್ತು ವಾಹನ ತಯಾರಿಕೆಯಲ್ಲಿ ಸಂಬಂಧಗಳ ಹೆಚ್ಚಿಸುವ ನಿರೀಕ್ಷೆಯಿದೆ.
Related Articles
ಗುಜರಾತಿ ನೃತ್ಯದ ಆಕರ್ಷಣೆ; ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀರಾಮ್’ ಘೋಷಣೆ
ಸಂಜೆ ಪೋಲೆಂಡ್‌ಗೆ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಗುಜರಾತಿ ನೃತ್ಯದ ಮೂಲಕ ಸ್ವಾಗತ ಕೋರಿದ್ದಾರೆ. ಬಳಿಕ ಅನಿವಾಸಿ ಭಾರತೀಯರು ಮೋದಿಯವರ ಕಾಣುತ್ತಿದ್ದಂತೆ ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀರಾಮ್’ ಘೋಷಣೆಗಳ ಕೂಗಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಈ ವೇಳೆ ನರೇಂದ್ರ ಮೋದಿ ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದವರಿಗೆ ಆಟೋಗ್ರಾಫ್ ಹಾಕಿ, ಫೋಟೋಗೆ ಪೋಸ್ ಕೊಟ್ಟರು. ಕೆಲವರು ಮಹಿಳೆಯರು ಮೋದಿಯವರ ಕೈಗೆ ರಾಖಿಯನ್ನೂ ಕಟ್ಟಿದರು.
Advertisement
ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ನಾವು ಗುರುತಿಸುತ್ತಿರುವ ಸಂದರ್ಭದಲ್ಲಿ ಪೋಲೆಂಡ್‌ಗೆ ನನ್ನ ಭೇಟಿ ಬಂದಿದೆ. ಪೋಲೆಂಡ್ ಮಧ್ಯ ಯುರೋಪ್‌ನಲ್ಲಿ ಪ್ರಮುಖ ಆರ್ಥಿಕ ಪಾಲುದಾರ. ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ನಮ್ಮ ಪರಸ್ಪರ ಬದ್ಧತೆಯು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ನನ್ನ ಸ್ನೇಹಿತ ಪ್ರಧಾನಿ ಡೊನಾಲ್ಡ್ ಟಸ್ಕ್ ರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ವಾರ್ಸಾದಲ್ಲಿರುವ ಜಾಮ್ ಸಾಹೇಬ್ ನವಾನಗರ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಈ ಸ್ಮಾರಕವು ನವಾನಗರದ (ಜಾಮ್‌ನಗರ) ಮಹಾರಾಜ ಜಾಮ್ ಸಾಹೇಬ್ ದ್ವಿಗ್ವಿಜಯ ಸಿನ್ಹಾಜಿ ರಣಜಿತ್‌ಸಿನ್ಹಾಜಿ ಸವಿನೆನಪಿಗಾಗಿ ಕಟ್ಟಿಸಲಾಗಿದೆ. ೧೯೪೨ರ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ನಿರಾಶ್ರಿತರಾಗಿದ್ದ ಪೊಲೀಶ್ ಮಕ್ಕಳಿಗೆ ವಸತಿ ವ್ಯವಸ್ಥೆ ಈ ಮಹಾರಾಜ ಕಲ್ಪಿಸಿದ್ದ ಅವರ ನೆನಪಿಗೆ ಸ್ಮಾರಕ ನಿರ್ಮಿಸಿದರು.