Advertisement

ಮೋದಿ ಮತ್ತೊಮ್ಮೆ ಖಚಿತ: ಬಿಎಸ್‌ವೈ

12:21 AM Apr 14, 2019 | Lakshmi GovindaRaju |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದೇಶದ 300ಕ್ಕೂ ಅಧಿಕ ಹಾಗೂ ಕರ್ನಾಟಕದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆದ್ದು, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಅರಮನೆ ಮೈದಾನದಲ್ಲಿ ನಡೆದ ಮೋದಿ ಮತ್ತೊಮ್ಮೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಲಬುರಗಿಗೆ ಮೂರು ಬಾರಿ ಹೋಗಿ ಬಂದಿದ್ದೇನೆ, ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಖಚಿತ. ಕೋಲಾರದಲ್ಲಿ ಕೆ.ಎಚ್‌.ಮುನಿಯಪ್ಪ ಗೆಲ್ಲಲು ಸಾಧ್ಯವೇ ಇಲ್ಲ.

ಮೋದಿ ಈ ಬಾರಿ ಮತ್ತು ಮುಂದಿನ ಬಾರಿಯೂ ಪ್ರಧಾನಿ ಆಗಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿಯೇ ಹೇಳಿದ್ದಾರೆ. ದೇಶದೆಲ್ಲೆಡೆ ಮೋದಿ ಅಲೆ ಇದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ತಲೆ ತಿರುಗಿದಂತೆ ಮಾತನಾಡುತ್ತಾರೆ, ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷದ ಹಿಂದೆಯೇ ಗೊತ್ತು ಎನ್ನುತ್ತಾರೆ. ಈ ರೀತಿಯ ಮಾತು ಅವರ ಹತಾಶೆಯನ್ನು ತೋರಿಸುತ್ತಿದೆ. ಇದು ಅವರ ನಿತ್ಯದ ನಡವಳಿಕೆಯಾಗಿದೆ.

ಕುಮಾರಸ್ವಾಮಿಯವರು ಪತ್ರಕರ್ತರಿಗೆ ಧಮ್ಕಿ ಹಾಕುವ ಮೂಲಕ ರಾಜ್ಯದಲ್ಲಿ ಗೂಂಡಾ ಸಂಸ್ಕೃತಿಯನ್ನು ಬೆಳೆಸಲು ಹೊರಟ್ಟಿದ್ದಾರೆ. ರಾಜ್ಯ ಸರ್ಕಾರದಲ್ಲಿ ಈಗಾಗಲೇ ಬಡಿದಾಟ ಪ್ರಾರಂಭವಾಗಿದೆ. ಸರ್ಕಾರ ಐಸಿಯುನಲ್ಲಿದ್ದು ಕೋಮಾಗೆ ಜಾರಿದೆ ಎಂದರು.

Advertisement

ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದ ನಾಯಕ ಪ್ರಧಾನಿಯಾಗಿದ್ದಾರೆ. ಪರಿಶಿಷ್ಟರಿಗೆ ರಾಷ್ಟ್ರಪತಿ ಸ್ಥಾನದ ಅವಕಾಶ ಬಿಜೆಪಿ ಕಲ್ಪಿಸಿದೆ. ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ ಎಂಬವರಿಗೆ ಇದೇ ಉತ್ತರ ಎಂದು ಹೇಳಿದರು.

ಗೊಂದಲಗಳಿಗೆ ತೆರೆ ಎಳೆದ ತೇಜಸ್ವಿನಿ: ಕೇಂದ್ರದ ಸಚಿವರಾಗಿದ್ದ ಅನಂತ ಕುಮಾರ್‌ ಅವರ ಪತ್ನಿ ಹಾಗೂ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅವರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ, ಸೀಟು ಹಂಚಿಕೆ ಕುರಿತಂತೆ ಆಗಿದ್ದ ಎಲ್ಲ ಗೊಂದಲಗಳಿಗೂ ಅಂತಿಮ ತೆರೆ ಎಳೆದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಜತೆ ವೇದಿಕೆಯ ಮೇಲೆ ಕುಳಿತಿದ್ದ ತೇಜಸ್ವಿನಿ ಅವರು, ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಕಾರ್ಯಕ್ರಮ ಆರಂಭಕ್ಕೂ ಮೊದಲೇ ವೇದಿಕೆಯ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next