Advertisement

ಮೋದಿ-ನೆತನ್ಯಾಹು ಜಂಟಿ ರೋಡ್‌ ಶೋ

10:35 AM Jan 18, 2018 | Team Udayavani |

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುಜರಾತ್‌ನ ಅಹಮದಾಬಾದ್‌ನಲ್ಲಿ ಭರ್ಜರಿ ರೋಡ್‌ಶೋ ನಡೆಸಿದ್ದಾರೆ. ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ 8 ಕಿ.ಮೀ.ವರೆಗಿನ ರೋಡ್‌ ಶೋದುದ್ದಕ್ಕೂ ಲಕ್ಷಾಂತರ ಜನರು ಭಾರತ ಹಾಗೂ ಇಸ್ರೇಲ್‌ ರಾಷ್ಟ್ರಧ್ವಜಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದರು. ನೆತಾನ್ಯಾಹು ಪತ್ನಿ ಸಾರಾ ಕೂಡ ಜತೆಗಿದ್ದರು. ಈ ಮಾರ್ಗದಲ್ಲಿ 50 ವೇದಿಕೆಗಳನ್ನು ನಿರ್ಮಿಸಿ ವಿವಿಧ ರಾಜ್ಯಗಳ ಜನರು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.

Advertisement

ಸಾಬರಮತಿಯ ಗಾಂಧಿ ಆಶ್ರಮಕ್ಕೆ ತಲುಪಿದ ನೆತಾನ್ಯಾಹುಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಾಸಿಸುತ್ತಿದ್ದ ಕೋಣೆ ಯನ್ನು ತೋರಿಸಿದರು. ಅಲ್ಲದೆ ಅವರು ಬಳಸುತ್ತಿದ್ದ ಸಾಮಗ್ರಿಗಳನ್ನೂ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೆ ಗಾಂಧಿ ಬಳಸುತ್ತಿದ್ದ ಚರಕವನ್ನು ನೆತನ್ಯಾಹು ದಂಪತಿಗಳು ವೀಕ್ಷಿಸಿ, ಅದರಲ್ಲಿ ನೂಲು ತೆಗೆಯುವ ಪ್ರಯತ್ನ ನಡೆಸಿದರು. ಸಾಬರಮತಿ ಆಶ್ರಮದಲ್ಲಿ ಮೋದಿ ಜತೆಗೆ ನೆತಾನ್ಯಾಹು ಗಾಳಿಪಟ ಹಾರಿಸಿದರು.

ಐಕ್ರಿಯೇಟ್‌ ಉದ್ಘಾಟನೆ: ಅಹ್ಮದಾ ಬಾದ್‌ನ ದಿಯೋ ಧೊಲೆರಾ ಗ್ರಾಮದಲ್ಲಿ ನಿರ್ಮಿಸ ಲಾಗಿರುವ ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕೇಂದ್ರ ಐಕ್ರಿಯೇಟ್‌ ಅನ್ನು ಮೋದಿ ಹಾಗೂ ನೆತಾನ್ಯಾಹು ಉದ್ಘಾಟಿಸಿ ದರು. ಉದ್ಯಮಶೀಲರಿಗೆ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ನಮಗೆ ಐಪ್ಯಾಡ್‌ ಹಾಗೂ ಐಫೋನ್‌ಗಳು ಗೊತ್ತು. ಈಗ ಜನರು ಐಕ್ರಿಯೇಟ್‌ ಬಗ್ಗೆಯೂ ತಿಳಿಯಬೇಕಿದೆ ಎಂದು ನೆತಾನ್ಯಾಹು ಹೇಳಿ ದ್ದಾರೆ. ಜೈ ಹಿಂದ್‌, ಜೈ ಭಾರತ್‌, ಜೈ ಇಸ್ರೇಲ್‌ ಎಂದು ಅವರು ಭಾಷಣ ಮುಕ್ತಾಯ ಮಾಡಿದ್ದು ಆಕರ್ಷಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next