Advertisement

ಮಹಿಳಾ ಲೊಕೋ ಪೈಲಟ್ ಶಿರಿಶಾ ಕಾರ್ಯಕ್ಕೆ ಮೋದಿ ಶ್ಲಾಘನೆ

02:03 PM May 30, 2021 | Team Udayavani |

ನವದೆಹಲಿ: ವೈದ್ಯಕೀಯ ಆಕ್ಸಿಜನ್ ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಓಡಿಸಿದ್ದ ಮಹಿಳಾ ಲೊಕೋ ಪೈಲಟ್ ಶಿರಿಶಾ ಗಜ್ನಿ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

Advertisement

ಇಂದು ಮನ್ ಕಿ ಬಾತ್ ನಲ್ಲಿ ಸಂವಾದ ನಡೆಸಿದ ಪ್ರಧಾನಿ, ಶಿರಿಶಾ ಅವರ ಕಾರ್ಯವನ್ನು ಶ್ಲಾಘಿಸಿದರು.

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು, ರಸ್ತೆಯ ಮೂಲಕ ಪ್ರಯಾಣಿಸುವ ಆಮ್ಲಜನಕ ಟ್ಯಾಂಕರ್‌ಗಳಿಗಿಂತ ವೇಗವಾಗಿ ದೇಶದ ಎಲ್ಲಾ ಮೂಲೆಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಸಾಗಿಸಿದೆ. ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಮಹಿಳೆಯರಿಂದ ಸಂಪೂರ್ಣವಾಗಿ ನಡೆಸಲಾಗುತ್ತಿದೆ ಎಂದು ಕೇಳಿದಾಗ ತಾಯಂದಿರು ಮತ್ತು ಸಹೋದರಿಯರು ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ಹೇಳಿದರು.

ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ಪರವಾಗಿ ಕೆಲಸ ಮಾಡುವ ಸ್ಪೂರ್ತಿಯನ್ನು ತಾನು ಪೋಷಕರಿಂದ ಪಡೆದುಕೊಂಡೆ, ಜನರ ಜೀವ ಉಳಿಸುವ ಕೆಲಸ ಮಾಡುತ್ತಿರುವ ಭಾಗವಾಗಿರುವುದಕ್ಕೆ ತಮಗೆ ಖುಷಿಯಿದೆ, ದೇವರ ಆಶೀರ್ವಾದವಿದು ಎಂದು ಶಿರಿಶಾ ಪ್ರಧಾನಿ ಜೊತೆ ಮಾತನಾಡುವಾಗ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next