Advertisement

ಇನ್ನು ಯುಎಇಯಲ್ಲೂ ರೂಪೇ ಕಾರ್ಡ್‌ ಬಳಸಿ

09:34 AM Aug 25, 2019 | Sriram |

ಅಬುಧಾಬಿ: ಭಾರತದ ಸರಕಾರಿ ಸ್ವಾಮ್ಯದ ರೂಪೇ ಕಾರ್ಡ್‌ ಅನ್ನು ಇನ್ನು ಯುಎಇನಲ್ಲೂ ಬಳಸಬಹುದು.ಗಲ್ಫ್ ರಾಷ್ಟ್ರಗಳಲ್ಲೇ ಇದೇ ಮೊದಲ ಬಾರಿಗೆ ರೂಪೇ ಕಾರ್ಡನ್ನು ಯುಎಇನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿ ಪರಿಚಯಿಸಿದರು.

Advertisement

ಇದರೊಂದಿಗೆ ಭಾರತ ಯುಎಇನ 1.75 ಲಕ್ಷ ಮಾರಾಟ ತಾಣಗಳು, 21 ಉದ್ದಿಮೆಗಳು ಮತ್ತು 5 ಸಾವಿರ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ಮಾಡಲು ಅನುಕೂಲವಾಗುವಂತೆ ಒಪ್ಪಂದ ಮಾಡಿಕೊಂಡಿದೆ.

ಇದರಿಂದಾಗಿ ಭಾರತದಿಂದ ಯುಎಇಗೆ ಹೋದವರು ರೂಪೇ ಕಾರ್ಡ್‌ ಬಳಸಿಯೇ ವ್ಯವಹಾರ ನಡೆಸಬಹುದು. ಜತೆಗೆ ಅನಿವಾಸಿ ಭಾರತೀಯರಿಗೂ ಇದು ಅವಕಾಶ ಕಲ್ಪಿಸಿದೆ.

ಯುಎಇ ಬ್ಯಾಂಕ್‌ಗಳಿಂದ ನೀಡಿಕೆ
ರೂಪೇ ಕಾರ್ಡ್‌ಗಳನ್ನು ಯುಎಇಯ ಬ್ಯಾಂಕ್‌ಗಳೂ ನೀಡಲಿವೆ. ಎಮಿರೇಟ್ಸ್‌ ಎನ್‌ಬಿಡಿ, ಫ‌ಸ್ಟ್‌ ಅಬುಧಾಬಿ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಾಗಳು ರೂಪೇ ನೀಡಲಿವೆ. ರೂಪೇ ಕಾರ್ಡ್‌ ಅನ್ನು ಈವರೆಗೆ ವಿದೇಶಿ ನೆಲದಲ್ಲಿ ಭೂತಾನ್‌, ಸಿಂಗಾಪುರ, ಮಾಲ್ಡೀವ್ಸ್‌ಗಳಲ್ಲಿ ಪರಿಚಯಿಸಲಾಗಿದೆ. ರೂಪೇ ಕಾರ್ಡ್‌ನಿಂದಾಗಿ ಮರ್ಚೆಂಟ್‌ ಕಾರ್ಡ್‌ ಕಂಪೆನಿಗಳಾದ ಮಾಸ್ಟರ್‌ ಕಾರ್ಡ್‌, ವೀಸಾ ಕಾರ್ಡ್‌ಗಳ ಮೇಲೆ ಅವಲಂಬನೆ ತಪ್ಪಲಿದ್ದು, ಭಾರತದ ಬ್ಯಾಂಕುಗಳು ಇವುಗಳಿಗೆ ನೀಡುತ್ತಿರುವ ಅಪಾರ ಪ್ರಮಾಣದ ಶುಲ್ಕ ದೇಶದ ಬೊಕ್ಕಸಕ್ಕೇ ಹೋಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next