Advertisement

ಸ್ವಂತ ಶ್ರಮದಿಂದ ಪ್ರಧಾನಿಯಾದವರು ಮೋದಿ

12:14 PM Oct 21, 2018 | Team Udayavani |

ಬೆಂಗಳೂರು: ಜಾತಿ, ಹಣ ಹಾಗೂ ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲದೆ ಸ್ವಂತ ಪರಿಶ್ರಮದಿಂದ ಪ್ರಧಾನ ಮಂತ್ರಿ ಹುದ್ದೆಗೇರಿದವರು ನರೇಂದ್ರ ಮೋದಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ರಾಷ್ಟ್ರ ಧರ್ಮ ಸಂಘಟನೆಯು ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಮೋದಿ ಮತ್ತೂಮ್ಮೆ’ ವಿಡಿಯೋ ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿ. ಕೇವಲ ಡಿಎನ್‌ಎ ಮಾತ್ರವೇ ಹಲವರನ್ನು ಪ್ರಧಾನಿ ಹುದ್ದೆಗೇರಿಸಿದೆ.

ಕೆಲವರು ಹಣಬಲ, ಜಾತಿಬಲ ಹಾಗೂ ಕುಟುಂಬ ರಾಜಕೀಯ ಹಿನ್ನೆಲೆಯಲ್ಲಿ ಪ್ರಧಾನಿಯಾಗುತ್ತಾರೆ. ಪ್ರಧಾನಿ ಆಯ್ಕೆಗಾಗಿ ನಡೆದ ಸಂಸದರ ಸಭೆಯಲ್ಲಿ ಪಂಚೆ ಕಟ್ಟಿಕೊಳ್ಳಲು ಎದ್ದು ನಿಂತವರನ್ನು ಪ್ರಧಾನಿ ಮಾಡಲಾಗಿದೆ. ಆದರೆ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಹುದ್ದೆಗೇರಿದ್ದು ಅದೃಷ್ಟ ಇಲ್ಲವೇ ವಂಶಪಾರಂಪರ್ಯದಿಂದಲ್ಲ. ಬದಲಿಗೆ ತಮ್ಮ ಪರಿಶ್ರಮದಿಂದ ಉನ್ನತ ಹುದ್ದೆಗೇರಿದ್ದಾರೆ ಎಂದು ಶ್ಲಾ ಸಿದರು.

ದೇಶದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕನಸು ಹೊಂದಿರುವ ಪ್ರಧಾನಿ ಮೋದಿಯವರು ದೇಶದ ಅಭಿವೃದ್ಧಿಗೆ ಅಗತ್ಯವಾದ ಸುಧಾರಣೆಗಳನ್ನು ತರಲು ಒತ್ತು ನೀಡಿದರು. ಫ‌ಸಲ್‌ ಬಿಮಾ ಯೋಜನೆ, ಜನಧನ್‌ ಯೋಜನೆ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಕನಸುಗಳನ್ನು ಹೊಂದಿರುವ ಪ್ರಧಾನಿಯವರು ಮತ್ತೂಮ್ಮೆ  ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು.

ರಂಗನಟ ಪ್ರಕಾಶ್‌ ಬೆಳವಾಡಿ ಮಾತನಾಡಿ, ಅರ್ಥಶಾಸ್ತ್ರ ವಿಷಯದಲ್ಲಿ ನೊಬೆಲ್‌ ಪಡೆದ ಅಮರ್ತ್ಯಸೇನ್‌ ಅವರು ಪಶ್ಚಿಮ ಬಂಗಾಳದಲ್ಲಿ ಬಡತನ ನಿವಾರಣೆಗೆ ಸ್ಥಳೀಯ ಸರ್ಕಾರಕ್ಕೆ ಸಲಹೆ ನೀಡುವಲ್ಲಿ ವಿಫ‌ಲರಾಗಿದ್ದಾರೆ. ಅವರಿಂದ ಆ ರಾಜ್ಯಕ್ಕೆ ಯಾವುದೇ ಉಪಯೋಗವಾಗಿಲ್ಲ.

Advertisement

ಈವರೆಗೆ ಮಲಗಿದ್ದ ಅವರು ಪ್ರಧಾನಿ ಮೋದಿಯವರು ನೋಟು ಅಮಾನ್ಯ ಮಾಡುತ್ತಿದ್ದಂತೆ ಎದ್ದು ಟೀಕಿಸಲಾರಂಭಿಸಿದ್ದಾರೆ ಎಂದು ಹೇಳಿದರು. ರಾಷ್ಟ್ರಧರ್ಮ ಸಂಘಟನೆಯ ಸಂತೋಷ್‌ ಕೆಂಚಾಂಬ, ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್‌ ಬಿದ್ರಿ, ಶಕುಂತಲಾ ಅಯ್ಯರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next