ಮೈಸೂರು: ಪ್ರಧಾನಿ ನರೇಂದ್ರ ಮೋದಿ ಏನೂ ಮಾಡದೇ ಲೋಕಸಭೆಯಲ್ಲಿ ಭಾಷಣ ಮಾಡುತ್ತಾರೆ. ಮೋದಿ ದೇಶ ಹಾಳು ಮಾಡುತ್ತಿದ್ದಾರೆ. ಅವರಿಂದ ದೇಶ ದಿವಾಳಿಯಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಕ್ಕೆ 135 ಲಕ್ಷ 87 ಸಾವಿರ ಕೋಟಿ ಸಾಲಯಿದೆ. ಈಗ 11 ಲಕ್ಷದ 59 ಸಾವಿರ ಕೋಟಿ ಸಾಲ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ 9 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದೆ. ಇದೇನಾ ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಅಚ್ಚೇ ದಿನ್ ಆಯೇಂಗೆ ಎಂದರೆ ಇದೇನಾ ವ್ಯಂಗ್ಯವಾಡಿದರು.
ನಜೆಟ್ ನಿರೀಕ್ಷೆಯಿಲ್ಲ: ರಾಜ್ಯ ಬಜೆಟ್ ನಲ್ಲಿ ಇವರಿಂದ ಯಾವುದೇ ನಿರೀಕ್ಷೆಯಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಇವರು ಬರೆದುಕೊಟ್ಟಿದ್ದನ್ನು ಭಾಷಣ ಮಾಡುತ್ತಾರೆ. ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. 4 ಲಕ್ಷದ 57 ಸಾವಿರ ಕೋಟಿ ಸಾಲ ಮಾಡಿದ್ದಾರೆ. ನಾನಿದ್ದಾಗ 2 ಲಕ್ಷದ 15 ಸಾವಿರ ಕೋಟಿ ಸಾಲವಿತ್ತು. ಇವರು ಮೂರು ವರ್ಷದಲ್ಲಿ ಇದರ ದುಪ್ಪಟ್ಟು ಸಾಲ ಮಾಡಿದ್ದಾರೆ. ಇವರಿಂದ ಜನಪರ ಬಜೆಟ್ ನಿರೀಕ್ಷೆ ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ:ಮಧ್ಯಂತರ ಆದೇಶದ ತುರ್ತು ವಿಚಾರಣೆಗೆ ಸುಪ್ರೀಂ ನಕಾರ; ರಾಷ್ಟ್ರೀಯ ವಿಚಾರ ಮಾಡಬೇಡಿ ಎಂದು ಸೂಚನೆ
ಕೇಂದ್ರ ಸರ್ಕಾರಕ್ಕೆ ಕೇಳುವ ಧಮ್ ರಾಜ್ಯದ ಯಾರಿಗೂ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಷೇರು ಅನುದಾನ ಕಡಿಮೆಯಾಗಿದೆ. ಕೇಂದ್ರದ ಯೋಜನೆಗೆ ಶೇ.70% ಕೊಡುತ್ತಿದ್ದರು. ಈಗ ಕೇಂದ್ರದ ಯೋಜನೆಗೆ 50 – 50 ಕೊಡಬೇಕು. ಜಿಎಸ್‌ಟಿ ಪರಿಹಾರ 20 ಸಾವಿರ ಕೋಟಿ ಬಾಕಿ ಇದೆ. ನಿರ್ಮಲಾ ಸೀತಾರಾಂ ಇಲ್ಲಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಯಾರಿಗೂ ಮೋದಿಯನ್ನು ಕೇಳುವ ಧೈರ್ಯವೇ ಇಲ್ಲ ಎಂದು ಟೀಕಿಸಿದರು.