Advertisement

Politics: ಮಧ್ಯಪ್ರದೇಶ ಗೆಲ್ಲಲು ಮೋದಿ ಸಿದ್ಧತೆ

10:36 PM Aug 19, 2023 | Team Udayavani |

ನವದೆಹಲಿ: ಇನ್ನು ಮೂರೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರ ಬೆನ್ನಲ್ಲೇ ಲೋಕಸಭಾ ಚುನಾವಣೆಯೂ ನಡೆಯಲಿದೆ. ವಿಶೇಷವೆಂದರೆ ಪ್ರಧಾನಿ ಮೋದಿ ಈ ರಾಜ್ಯಕ್ಕೆ ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಆರಕ್ಕೂ ಅಧಿಕ ಬಾರಿ ಭೇಟಿ ನೀಡಿದ್ದಾರೆ! ಹೋದಾಗಲೆಲ್ಲ ರಾಜ್ಯಕ್ಕೆ ಏನಾದರೂ ದೊಡ್ಡ ಕಾಣಿಕೆಯನ್ನೇ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿನ 29 ಸ್ಥಾನಗಳ ಪೈಕಿ 28 ಅನ್ನು ಗೆದ್ದಿತ್ತು ಎನ್ನುವುದನ್ನು ಗಮನಿಸಬೇಕು.

Advertisement

ಈ ಬಾರಿ ಸಾಗರ ಜಿಲ್ಲೆಗೆ ಜು.12ಕ್ಕೆ ಭೇಟಿ ನೀಡಿದ್ದ ಮೋದಿ, ಸಂತ ರವಿದಾಸ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ವೇಳೆ ಮಾತನಾಡಿದ್ದ ಅವರು, ಈಗ ನಾನು ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಸಂತ ರವಿದಾಸರು ತಮ್ಮ ದೇಗುಲ ಉದ್ಘಾಟನೆ ಮಾಡಲು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದಿದ್ದರು! ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ತಾನು ಪ್ರಧಾನಿಯಾಗಿ ಮಧ್ಯಪ್ರದೇಶಕ್ಕೆ ಮರಳುವೆ ಎಂಬ ಭರವಸೆಯನ್ನು ಅವರು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು.

ಇನ್ನೂ ಚುನಾವಣೆಗೆ ದಿನಾಂಕ ನಿಗದಿಯಾಗದಿದ್ದರೂ ಮಧ್ಯಪ್ರದೇಶಕ್ಕೆ ಕೇಂದ್ರ ಸಚಿವರಾದ ಭೂಪೇಂದ್ರ ಸಿಂಗ್‌ ಯಾದವ್‌, ಅಶ್ವಿ‌ನಿ ವೈಷ್ಣವ್‌ರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ಪ್ರಧಾನಿ ಮೋದಿ ನೇಮಿಸಿದ್ದಾರೆ. ರಾಜ್ಯದ ಪ್ರಮುಖ ನಾಯಕ, ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ರನ್ನು ಕನ್ವೀನರ್‌ರನ್ನಾಗಿ ನೇಮಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಬೂತ್‌, ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಿಜೆಪಿ ತೀವ್ರ ಪರಿಶ್ರಮ ಹಾಕುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆ ಗೆದ್ದಲ್ಲಿ, ಲೋಕಸಭೆಯಲ್ಲೂ ಗೆಲ್ಲುವುದು ಬಿಜೆಪಿಗೆ ಸರಾಗವಾಗಲಿದೆ. ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಲೋಕಸಭೆಯಲ್ಲಿ ಅಧಿಕಾರಕ್ಕೇರುವುದು ಸುಲಭವಾಗುತ್ತದೆಯೆನ್ನುವುದು ಎಲ್ಲರಿಗೂ ಗೊತ್ತಿರುವ ಅಂಶ.

ಮಧ್ಯಪ್ರದೇಶಕ್ಕೆ ಮೋದಿ ಕಾಣಿಕೆಗಳು
ಕಳೆದ ವರ್ಷ ಸೆ.17ರಂದು ಮಧ್ಯಪ್ರದೇಶಕ್ಕೆ 8 ಚೀತಾಗಳನ್ನು ಮೋದಿ ಕಾಣಿಕೆಯಾಗಿ ನೀಡಿದ್ದರು. ಕೇವಲ ಒಂದು ತಿಂಗಳ ಉಜ್ಜೆ„ನಿಯಲ್ಲಿ “ಮಹಾಕಾಲ ಲೋಕ’ವನ್ನು ಸಮರ್ಪಿಸಿದ್ದರು. ಇನ್ನೂ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next