Advertisement

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

11:28 PM Apr 23, 2024 | Team Udayavani |

ಧಮ್ತಾರಿ: ವಿಪಕ್ಷಗಳ ವಿರುದ್ಧ ಸತತ ಆರೋಪಗಳ ಸುರಿಮಳೆ ಸುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, “ಸಂಪತ್ತು ಮರುಹಂಚಿಕೆ’, “ಮೀಸಲಾತಿ ಮರುಹಂಚಿಕೆ’ಯ ಬೆನ್ನಲ್ಲೇ ಕಾಂಗ್ರೆಸ್‌ “ದೇಶ ವಿಭಜನೆ’ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

Advertisement

ಮಂಗಳವಾರ ರಾಜಸ್ಥಾನದ ರ್ಯಾಲಿ ಬಳಿಕ ಛತ್ತೀಸ್‌ಗಢದ ಮೆಹ್‌ಸಾಮಂದ್‌ನಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ಇತ್ತೀಚೆಗೆ ಗೋವಾದ ಕಾಂಗ್ರೆಸ್‌ ನಾಯಕ ನೀಡಿದ ಹೇಳಿಕೆಯನ್ನು ಉಲ್ಲೇ ಖೀಸಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ ಗೋವಾ ಅಭ್ಯರ್ಥಿ ಭಾರತದ ಸಂವಿಧಾನವು ಗೋವಾಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳುತ್ತಾರೆ. ಸಂವಿಧಾನವನ್ನು ಗೋವಾದ ಮೇಲೆ ಹೇರಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು  ಅಂಬೇಡ್ಕರ್‌ ಹಾಗೂ ದೇಶದ ಸಂವಿಧಾನಕ್ಕೆ ಮಾಡಿದ ಅವಮಾನವಲ್ಲವೇ? ಇಂದು ಅವರು ಗೋವಾದಲ್ಲಿ ಸಂವಿಧಾನವನ್ನು ಅವಮಾನಿಸುತ್ತಾರೆ. ನಾಳೆ ಇಡೀ ದೇಶದಲ್ಲೇ ಅವರು ಸಂವಿಧಾನವನ್ನು ತುತ್ಛವಾಗಿ ಕಾಣುತ್ತಾರೆ. ದೇಶವನ್ನು ವಿಭಜಿಸುವ ಸಂಚು ಕಾಂಗ್ರೆಸ್‌ನದು’ ಎಂದು ಮೋದಿ ಹೇಳಿದ್ದಾರೆ.

ಒಂದೆಡೆ ಬಿಜೆಪಿ 3ನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಿಸಲಿದೆ ಎಂದು ಕಾಂಗ್ರೆಸ್‌ ಎಲ್ಲೆಡೆ ಆರೋಪಿಸುತ್ತಾ ಬರುತ್ತಿರುವಂತೆ ಯೇ, ಪ್ರಧಾನಿ ಮೋದಿಯವರ ಈ ಹೇಳಿಕೆ ಮಹತ್ವ ಪಡೆದಿದೆ. ಕರ್ನಾಟಕದ ಸಂಸದ ಅನಂತಕುಮಾರ್‌ ಹೆಗಡೆ ಅವರು, “400+ ಸೀಟುಗಳು ಎನ್‌ಡಿಎಗೆ ಬಂದರೆ ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯ’ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್‌, “ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ’ ಎಂದು ಆರೋಪಿಸುತ್ತಿದೆ.

ಹಿಂಸಾಚಾರಕ್ಕೆ ಪ್ರಚೋದನೆ: “ಕಾಂಗ್ರೆಸ್‌ ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ’ ಎಂದೂ ಮೋದಿ ಆರೋಪಿಸಿದ್ದಾರೆ. ಅಲ್ಲದೇ ನಾನು ಛತ್ತೀಸ್‌ಗಢದಿಂದ ನಕ್ಸಲಿಸಂ ಅನ್ನು ಬೇರುಸಮೇತ ಕಿತ್ತುಹಾಕುತ್ತೇನೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next