Advertisement
ಮೋದಿಯವರು ನನ್ನ ಆತ್ಮೀಯ ಗೆಳೆಯ. ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರೊಬ್ಬ ಶ್ರೇಷ್ಠ ನಾಯಕ ಎಂದೂ ಹೇಳಿದ ಟ್ರಂಪ್, ತಮ್ಮ ಕುಟುಂಬದ ಭಾರತ ಪ್ರವಾಸದ ದಿನಗಳನ್ನು ಹಾಗೂ ಪ್ರಧಾನಿ ಮೋದಿಯವರ ಹೂಸ್ಟನ್ ಕಾರ್ಯಕ್ರಮವನ್ನು ಸ್ಮರಿಸಿದ್ದಾರೆ.ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರಾಟ್ ಹಾಗೂ ರಿಪಬ್ಲಿಕನ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಭಾರತೀಯ- ಅಮೆರಿಕನ್ ಸಮುದಾಯವನ್ನು ಓಲೈಸುತ್ತಿವೆ. ಇತ್ತೀಚೆಗಷ್ಟೇ ಮ್ಯಾಸನ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯು, ಸಾಂಪ್ರದಾಯಿಕವಾಗಿ ಡೆಮಾ ಕ್ರಾಟ್ ಪಕ್ಷದ ಪರ ಮತ ಚಲಾಯಿಸುತ್ತಿದ್ದ ಭಾರತೀಯ - ಅಮೆರಿಕನ್ ಸಮುದಾಯವು, ಟ್ರಂಪ್- ಮೋದಿ ಆತ್ಮೀಯತೆಯ ಕಾರಣಕ್ಕಾಗಿ ರಿಪಬ್ಲಿಕನ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಆದರೆ, ಡೆಮಾಕ್ರಾಟ್‌ನ ಉಪಾ ಧ್ಯಕ್ಷ ಹುದ್ದೆಯ ಸ್ಪರ್ಧಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಹೆಸರು ಘೋಷಣೆಯಾಗುವ ಮೊದಲೇ ಈ ಸಮೀಕ್ಷೆ ನಡೆದಿತ್ತು.