Advertisement

ಹಳತಕ್ಕೆ ಸಿಗಲಿದೆ ಹೊಸತನ; ಡಬ್ಲ್ಯುಎಚ್‌ಒದ ಸಾಂಪ್ರದಾಯಿಕ ವೈದ್ಯ ಕೇಂದ್ರಕ್ಕೆ ಮೋದಿ ಶಂಕು

05:33 PM Apr 20, 2022 | Team Udayavani |

ಜಾಮ್‌ನಗರ್‌/ಬನಾಸ್‌ಕಾಂತಾ: “ಸಾಂಪ್ರದಾಯಿಕ ಔಷಧ ವ್ಯವಸ್ಥೆ ಮತ್ತೆ ಶುರುವಾಗಲಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಪದ್ಧತಿಯ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿದ್ದೇ ಇದಕ್ಕೆ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿ ರುವ ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಸೋಮವಾರದಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಅವರ ಪ್ರವಾಸದ ಎರಡನೇ ದಿನವಾಗಿತ್ತು.

ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಕೇಂದ್ರ (ಡಬ್ಲ್ಯು ಎಚ್‌ಒ ಜಿಸಿಟಿಎಂ WHO GCTM))ಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, “ಪ್ರಸಕ್ತ ವರ್ಷ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ತಿಗೊಂಡಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹೊಸ ಕೇಂದ್ರ ಸ್ಥಾಪನೆ ಮಾಡುವ ನಿರ್ಧಾರ ಐತಿಹಾಸಿಕ ವಾದದ್ದು. ಮುಂದಿನ 25 ವರ್ಷಗಳನ್ನು ಗುರಿಯಾ ಗಿರಿಸಿಕೊಂಡು ಈ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ಎಲ್ಲ ವೈದ್ಯ ಪದ್ಧತಿಗಳನ್ನು ಒಳಗೊಂಡಿರುವ ಆರೋಗ್ಯ ಪದ್ಧತಿಯನ್ನು ಬಳಕೆ ಮಾಡುವುದರತ್ತ ಆಸಕ್ತಿ ಈಗ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಪ್ರೋತ್ಸಾಹಕ್ಕಾಗಿ ನಿರ್ಮಾಣವಾಗಲಿರುವ ಈ ಕೇಂದ್ರ ಪ್ರಾಮುಖ್ಯ ಪಡೆಯಲಿದೆ. ವಿಶೇಷವಾಗಿ ಮುಂದಿನ 25 ವರ್ಷಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳು ಪೂರ್ತಿಯಾಗುವ ವೇಳೆ, ಪ್ರಪಂಚದ ಮನೆ ಮಾತಾಗಿ ಈ ಕೇಂದ್ರ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ ಪ್ರಧಾನಿ.

ಎಲ್ಲ ಅಂಶಗಳು: ಆಯುರ್ವೇದ ಸೇರಿದಂತೆ ದೇಶದ ಪುರಾತನ ವೈದ್ಯ ಪದ್ಧತಿ ಮತ್ತು ಇತರ ವೈದ್ಯ ಪದ್ಧತಿಗಳು ಕೇವಲ ರೋಗಕ್ಕೆ ಚಿಕಿತ್ಸೆ ನೀಡಿ ಗುಣಪಡಿಸುವ ವ್ಯವಸ್ಥೆ ಹೊಂದಿರಲಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳಿಗೂ ಅವುಗಳು ಉತ್ತರವಾಗಿದ್ದವು. ಇತ್ತೀಚಿನ ಜೀವನ ಶೈಲಿಯಿಂದ ಮತ್ತು ಹೊಸತಾಗಿ ಕಂಡುಬರುತ್ತಿರುವ ಹೊಸ ರೀತಿಯ ರೋಗಗಳಿಗೆ ನಮ್ಮ ದೇಶದ ಸಾಂಪ್ರದಾಯಿಕ ವೈದ್ಯ ಪದ್ಧತಿ ಉತ್ತರವಾಗಬಲ್ಲುದು. ದೇಶದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡುವ ಮಹತ್ವವನ್ನು ಹಿರಿಯರು ಅರಿತಿದ್ದರು. ಆದರೆ ವರ್ಷಗಳು ಕಳೆದಂತೆ ನಾವೇ ಅದರ ಮಹತ್ವ ಅರಿತುಕೊಳ್ಳುವಲ್ಲಿ ವಿಫ‌ಲರಾಗಿದ್ದೇವೆ‌ ಎಂದರು ಪ್ರಧಾನಿ ಮೋದಿ.

Advertisement

ಸಿರಿಧಾನ್ಯ ವರ್ಷ: ಮುಂದಿನ ವರ್ಷವನ್ನು ಅಂತಾ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ಧರಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಆಯುರ್ವೇದ, ಯುನಾನಿ, ಸಿದ್ಧ ವೈದ್ಯ ಪದ್ಧತಿಗಳು ಈಗ ಜಗತ್ತಿನಲ್ಲಿ ಮತ್ತೆ ಪ್ರಸಿದ್ಧಿಯಾಗುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾ, ಭೂತಾನ್‌ ದೊರೆ ಜಿಗೆ¾ ಖೇಸರ್‌ ನ್ಯಾಮ್‌ಗೆಲ್‌ ವಾಂಗ್‌ಚುಕ್‌ ವರ್ಚುವಲ್‌ ಆಗಿ ಭಾಗವಹಿಸಿದ್ದರು. ಮಾರಿಷಸ್‌ ಪ್ರಧಾನಿ ಪ್ರವೀಣ್‌ ಜಗನ್ನಾಥ್‌, ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಡಾ.| ಟೆಡೋಸ್‌ ಆಧನೊಂ ಗೇಬ್ರೆ ಯೋಸಿಸ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next