ದಾವಣಗೆರೆ: ಬೆಂಗಳೂರು – ಮೈಸೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ನಾವು. ಹತ್ತು ಪಥದ ರಸ್ತೆ ಮಾಡಬೇಕೆಂದು ಅನುಮೋದನೆ ಮಾಡಿದ್ದು ನಾವು. ನಾವು ಮಾಡಿದ ಕೆಲಸಕ್ಕೆ ಅವರು ಬಂದು ಉದ್ಘಾಟನೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಸರಿಯಾಗಿ ರಸ್ತೆಗಳೇ ಆಗಿಲ್ಲ. ಇನ್ನು ಬೈಪಾಸ್ ಮಾಡಿಲ್ಲ, ಅಂಡರ್ ಪಾಸ್ ಮಾಡಿಲ್ಲ. ಸರ್ವಿಸ್ ರಸ್ತೆ ಮಾಡದೆ ಟೋಲ್ ಸಂಗ್ರಹ ಮಾಡುವಂತಿಲ್ಲ ಎಂದರು.
ಇನ್ನು ಹೆಚ್ಚು ಕೆಲಸಗಳು ಬಾಕಿ ಇದ್ದರು ಪ್ರಧಾನಿ ಕರೆಸಿ ಉದ್ಘಾಟನೆ ಮಾಡಿದ್ದಾರೆ. ಚುನಾವಣೆ ಇದೆಯಂದು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ ಎಂದು ಟೀಕಿಸಿದ ಅವರು, ರಮೇಶ್ ಜಾರಕಿಹೊಳಿ ಹೇಳಿದಂತೆ ಸಿ.ಡಿ ಬ್ಲಾಕ್ ಮೇಲ್ ವಿಚಾರ ನನಗೆ ಗೊತ್ತಿಲ್ಲ ಎಂದರು.