Advertisement

ಪ್ರಧಾನಿ ಮೋದಿ 56 ಇಂಚಿನ ಎದೆ ಮುಸ್ಲಿಮರಿಗೆ ಮಾತ್ರ : ಓವೈಸಿ

04:54 PM Jan 25, 2018 | udayavani editorial |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇರುವುದು ಮುಸ್ಲಿಮರಿಗಾಗಿ  ಮಾತ್ರ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ. 

Advertisement

ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಪದ್ಮಾವತಿ ಚಿತ್ರದ ವಿರುದ್ಧ ಶ್ರೀ ರಜಪೂತ ಕರ್ಣಿ ಸೇನೆ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಾಗಿ ಓವೈಸಿ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು. 

ಪದ್ಮಾವತ್‌ ಕುರಿತ ಬಿಜೆಪಿ ನಿಲುವು ಪಕೋಡ ಪಾಲಿಟಿಕ್ಸ್‌ ಎಂದು ವ್ಯಂಗ್ಯವಾಡಿದ ಓವೈಸಿ, ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಪಕ್ಷ ಪದ್ಮಾವತ್‌ ಪ್ರತಿಭಟನಕಾರರಿಗೆ ಮಣಿಯುತ್ತಿದೆ ಎಂದು ಟೀಕಿಸಿದರು. 

ಎರಡು ದಿನಗಳ ಹಿಂದಷ್ಟೇ ಓವೈಸಿ ಅವರು ತ್ರಿವಳಿ ತಲಾಕ್‌ ವಿಷಯದಲ್ಲಿ ಮೋದಿ ಸರಕಾರದ ವಿರುದ್ಧ ವಾಕ್‌ ದಾಳಿ ನಡೆಸಿ ಮಹಿಳೆಯರಿಗೆ ನ್ಯಾಯ ಕೊಡುವ ನೆಪದಲ್ಲಿ ಇಸ್ಲಾಮಿಕ್‌ ಶರಿಯಾ ಕಾನೂನನ್ನು ಪ್ರಧಾನಿ ಮೋದಿ ಸರಕಾರ ಗುರಿ ಇರಿಸಿಕೊಂಡಿದೆ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next