Advertisement

ಖಾಸಗಿ ಪರಿಣಿತರ ನೇಮಕಕ್ಕೆ ಕಿಡಿ

06:00 AM Jun 12, 2018 | Team Udayavani |

ಲಖನೌ: ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿ ಪರಿಣಿತರನ್ನು ನೇಮಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜಕೀಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬಿಹಾರ ಸಿಎಂ ನಿತೀಶ್‌ ಕುಮಾರ್‌ ಈ ನಿಲುವನ್ನು ಸ್ವಾಗತಿಸಿದ್ದರೆ, ಬಿಎಸ್‌ಪಿ ನಾಯಕಿ ಮಾಯಾವತಿ ಸೇರಿದಂತೆ ವಿಪಕ್ಷಗಳು ಇದನ್ನು ಟೀಕಿಸಿವೆ. ಈ ಯೋಜನೆ ಒಂದು ಪ್ರಯೋಗ.  ಜಡ್ಡುಗಟ್ಟಿದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಿಂದಾಗಿ ದೇಶದ ಆಡಳಿತಾತ್ಮಕ ಅಗತ್ಯ ಪೂರೈಸಲಾಗುತ್ತಿಲ್ಲ. ಅಧಿಕಾರಿಗಳ ಸಂಖ್ಯೆಯನ್ನು ಕಾಂಗ್ರೆಸ್‌ ಆಡಳಿತ ಕಡಿಮೆ ಮಾಡಿದ್ದೇ ಇದಕ್ಕೆ ಕಾರಣ ಎಂದು ನಿತೀಶ್‌ ಆರೋಪಿಸಿದ್ದಾರೆ. ಇನ್ನೊಂದೆಡೆ ಮಾಯಾವತಿ, ಇದು ಆಡಳಿತಾತ್ಮಕ ವೈಫ‌ಲ್ಯ ಎಂದಿದ್ದಾರೆ.   ಸಿಪಿಎಂ ಮುಖ್ಯಸ್ಥ ಸೀತಾರಾಂ ಯೆಚೂರಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಮುಂತಾದವರೂ ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next