Advertisement
ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮತ ಕೇಳಲು ರಾಜ್ಯಕ್ಕೆ ಕಾಲಿರಿಸಬಾರದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗ್ರಹಿಸಿದ್ದಾರೆ.
Related Articles
2004 ರ ಸಂಸತ್ ಚುನಾವಣೆ ಸಂದರ್ಭ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಪ್ರಕಾಶಿಸುತ್ತಿದೆ ಎನ್ನುವ ಪ್ರಚಾರ ನಡೆಸಿಯೂ ಜನರ ಸಮಸ್ಯೆಯನ್ನು ಅರಿಯದ ಕಾರಣ ಹೀನಾಯ ಸೋಲನುಭವಿಸಿದ್ದರು. ಈಗ ಮೋದಿಯವರೂ ಅದೇ ರೀತಿ ಪ್ರಚಾರ ನಡೆಸುತ್ತಿದ್ದು, ಪರಾಜಯ ಖಚಿತ. ಅಬ್ ಕೀ ಬಾರ್ ಚಾರ್ ಸೌ ಬಾರ್ ಎನ್ನುತ್ತಿರುವ ಬಿಜೆಪಿ 150 ಸೀಟುಗಳನ್ನೂ ದಾಟದು ಎಂದು ಹೇಳಿದರು.
Advertisement
ದೇಶಕ್ಕೆ ಮಾದರಿ: ರಾಜ್ಯದ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡಿರುವ ಗ್ಯಾರಂಟಿಗಳು ದೇಶಕ್ಕೆ ಜನರ ಕಲ್ಯಾಣದ ಮಾದರಿಯಾದರೆ, ಕೇಂದ್ರದ ನರೇಂದ್ರ ಮೋದಿ ಸರಕಾರ “ಚೊಂಬು’ ಮಾದರಿ ಎಂದು ಲೇವಡಿ ಮಾಡಿದ ಸುರ್ಜೇವಾಲ, ಉಚಿತ ಅಕ್ಕಿ ನೀಡಲು ಬೇಕಾದಷ್ಟು ಅಕ್ಕಿ ಪೂರೈಸಲು ಮೋದಿ ಸರಕಾರ ನಿರಾಕರಿಸಿದಾಗ 10 ಕೆ.ಜಿ. ಅಕ್ಕಿಗೆ ಸಮನಾದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. 1.50 ಲಕ್ಷ ಮಂದಿ ಈಗಾಗಲೇ ಯುವನಿಧಿ ಪಡೆಯುತ್ತಿದ್ದು, ನಿತ್ಯವೂ ಈ ಸಂಖ್ಯೆ ಏರುತ್ತಿದೆ. ಈ ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸುತ್ತಿದೆ. ಸಮಾನ ನ್ಯಾಯದ ಪರಿಕಲ್ಪನೆಯನ್ನು ಸಾಕಾರ ಮಾಡುತ್ತಿದೆ ಎಂದು ವಿವರಿಸಿದರು.
ಚೊಂಬು ಮಾದರಿ: ಪ್ರಧಾನಿ ನರೇಂದ್ರ ಮೋದಿ ಸರಕಾರವು ಕರ್ನಾಟಕ ಹಾಗೂ ದೇಶದ ಜನತೆಗೆ ಚೊಂಬು ಬಿಟ್ಟು ಬೇರೇನೂ ನೀಡಿಲ್ಲ. 15ನೇ ಹಣಕಾಸು ಆಯೋಗದಡಿ 58 ಸಾವಿರ ಕೋಟಿ ರೂ. ಕೊಟ್ಟಿಲ್ಲ, ರೈತರ ಆದಾಯ ದ್ವಿಗುಣವಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ವಾಗ್ಧಾಳಿ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ| ಮಂಜುನಾಥ ಭಂಡಾರಿ, ಮಾಜಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.
ನೇಹಾ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ: ಸುರ್ಜೇವಾಲಮಂಗಳೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸುತ್ತೇನೆ. ಪ್ರಕರಣದ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವುದಾಗಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಭರವಸೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪ್ರಕರಣದ ತನಿಖೆ 90 ದಿನಗಳಲ್ಲಿ ಪೂರ್ಣಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು. ಆದರೆ ಈ ಪ್ರಕರಣವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು. ಈ ಹಿಂದೆ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನೂ ಬಿಜೆಪಿಯವರು ರಾಜಕೀಯಗೊಳಿಸಿದ್ದರು. ಕೊನೆಗೆ ಅದು ಆಕಸ್ಮಿಕ ಮರಣ ಎಂದು ಸಿಬಿಐ ತನಿಖೆ ತಿಳಿಸಿತ್ತು. ನೇಹ ನಮ್ಮೆಲ್ಲರ ಪುತ್ರಿ, ಆರೋಪಿಯ ಬಂಧನವಾಗಿದೆ. ಪೂರ್ಣ ಶಕ್ತಿಯಿಂದ ತನಿಖೆ ನಡೆಸಲಾಗುವುದು ಎಂದರು.