Advertisement

‘ಮೋದಿ ಸರಕಾರ ಕೈಗಾರಿಕೋದ್ಯಮಿಗಳ ಪರ’

03:47 PM Oct 08, 2017 | Team Udayavani |

ಸುಳ್ಯ: ಪೆಟ್ರೋಲ್‌ ಬೆಲೆ ಮತ್ತಷ್ಟು ಇಳಿಕೆ ಮಾಡಬಹುದಾಗಿದ್ದರೂ ಮಾಡಿಲ್ಲ. ಬದಲಾಗಿ ಅಂಬಾನಿ, ಅದಾನಿ, ರಿಲಯನ್ಸ್‌ ಅವರಂತ ಕೈಗಾರಿಕೋದ್ಯಮಿಗಳಿಗೆ ಪೂರಕ ವಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರ ನಡೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದರು.

Advertisement

ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಶನಿವಾರ ಜರಗಿದ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ನ ಪರಿವರ್ತನ ಸಮಾವೇಶದಲ್ಲಿ ಮಾತನಾಡಿದರು. ಪ್ರಣಾಳಿಕೆಯಲ್ಲಿ ನೀಡಿ ದಂತೆ ಭರವಸೆ ಈಡೇರಿಸಿದ್ದು ಸಿದ್ದರಾಮಯ್ಯ ಸರಕಾರ, ಪ್ರಣಾಳಿಕೆಯಲ್ಲಿ ಹೇಳಿ ಕಾರ್ಯ ಈಡೇರಿಸದ್ದು ಮೋದಿ ನೇತೃತ್ವದ ಕೇಂದ್ರ ಸರಕಾರ ಎಂದು ಟೀಕಿಸಿದರಲ್ಲದೇ, ಕೇಂದ್ರದ ಮೋದಿ ಸರಕಾರ ಯುಪಿಎ ಸರಕಾರದ ಹಳೆಯ ಯೋಜನೆಗಳನ್ನೇ ಹೆಸರು ಬದಲಾವಣೆ ಮಾಡಿ ಜನರಿಗೆ ನೀಡುತ್ತಿದೆ ಎಂದು ದೂಷಿಸಿದರು.

ತಾನು ಬಂಟ್ವಾಳ ಕ್ಷೇತ್ರದಲ್ಲಿರದಿದ್ದರೂ ತನ್ನ ಕ್ಷೇತ್ರವನ್ನು ತಾನು ಅಭಿವೃದ್ಧಿ ಮಾಡಿದ್ದೇನೆ. ಆದರೆ ಸುಳ್ಯದಲ್ಲಿ ಬಿಜೆಪಿಯ ಶಾಸಕರಿದ್ದರೂ ಯಾವ ರೀತಿ ಅಭಿವೃದ್ಧಿ ಆಗಿದೆ ಎಂಬುಂದು ಇಲ್ಲಿನ ಜನರಿಗೆ ತಿಳಿದಿದೆ. ಸುಳ್ಯದಲ್ಲಿ ಕಾಂಗ್ರೆಸ್‌ ಶಾಸಕರಿಲ್ಲದಿದ್ದರೂ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡಲಾಗಿದೆ ಎಂದರು.

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಊಟಕ್ಕೆ ಕೊಲ್ಲೂರು ದೇವಸ್ಥಾನದಿಂದ ಹಣದ ರೂಪದಲ್ಲಿ ದೇಣಿಗೆ ಬರುತ್ತಿತ್ತು. ಅದು ಅನುದಾನಿತ ಶಾಲೆ. ಸರಕಾರದ ಅನುದಾನದಲ್ಲಿ ಶಾಲೆ ನಡೆಯುತ್ತಿದೆ. ಶಾಲೆಗೆ ಬರುತ್ತಿದ್ದ ಬಿಸಿಯೂಟ ಯೋಜನೆಯನ್ನು ಬೇಡ ಎಂದು ಬರೆದುಕೊಟ್ಟಿದ್ದರು. ಕಲ್ಲಡ್ಕದಲ್ಲಿರುವುದು ಶ್ರೀರಾಮ ಭಜನ ಮಂದಿರ ಮಂದಿರ ಅಲ್ಲ. ಅದೊಂದು ವಾಣಿಜ್ಯ ಕೇಂದ್ರ ಎಂದು ಟೀಕಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬದಲಾವಣೆ ನಿರೀಕ್ಷಿಸುತ್ತಿದ್ದು, ಪರಿವರ್ತನೆಗೆ ಕಾರಣವಾಗಲಿದ್ದಾರೆ. ಇದಕ್ಕಾಗಿ ಕಾರ್ಯಕರ್ತರಿಗೆ ಮಾರ್ಗ ದರ್ಶನ ನೀಡಲು ಈ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

Advertisement

ಕೆಪಿಸಿಸಿ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ, ಬಿಜೆಪಿಗರು ಪ್ರತಿಯೊಂದಕ್ಕೂ ಕಾಂಗ್ರೆಸ್‌ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ತಾಕತ್ತು ಇದ್ದರೆ ಸಂಸದ ನಳಿನ್‌ಕುಮಾರ್‌ ಕಟೀಲು ನೇತೃತ್ವದಲ್ಲಿ ಪುಷ್ಪಗಿರಿ ಯೋಜನೆಯನ್ನು ನಿಲ್ಲಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮುತ್ತಿಗೆ ಹಾಕಲಿ ಎಂದು ಸವಾಲೆಸೆದರು.

ಮಾಜಿ ಜಿ.ಪಂ. ಸದಸ್ಯ ಧನಂಜಯ  ಅಡ್ಪಂಗಾಯ, ದಿವ್ಯಪ್ರಭಾ ಚಿಲ್ತಡ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಕೆ.ಪಿ.ಸಿ.ಸಿ. ಸದಸ್ಯರಾದ ಡಾ| ರಘು, ಕೆಪಿಸಿಸಿ ಅಲ್ಪಸಂಖ್ಯಾಕರ ಘಟಕದ ಕಾರ್ಯದರ್ಶಿ ಎಸ್‌. ಸಂಶುದ್ಧೀನ್‌, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಶೇಖರ್‌ ಕುಕ್ಕೇಡಿ, ಜಿಲ್ಲಾ  ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್‌.ಎಸ್‌. ಕರೀಂ, ರಾಜ್ಯ ಕಾಂಗ್ರೆಸ್‌ ಉಪಾಧ್ಯಕ್ಷೆ ಅಪ್ಪಿ, ಜಿ.ಪಂ.ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್‌, ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಚಾರ್‌, ಯುವಕಾಂಗ್ರೆಸ್‌ ಅಧ್ಯಕ್ಷ ಸಿದ್ಧಿಕ್‌ ಕೊ , ಇಂಟೆಕ್‌ ಕಾಂಗ್ರೆಸ್‌ ಅಧ್ಯಕ್ಷ ಉದಯಕುಮಾರ್‌ ಕುಕ್ಕುಡೇಲು, ಪಿ.ಸಿ. ಜಯರಾಮ, ತಾ.ಪಂ. ಸದಸ್ಯರಾದ ಅಶೋಕ್‌ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ಅಬ್ದುಲ್‌ ಗಫೂರ್‌, ಅಶೋಕ ಚೂಂತಾರು, ಜೂಲಿಯಾನ ಕ್ರಾಸ್ತಾ, ಗೋಕುಲ್‌ದಾಸ್‌, ಅಚ್ಯುತ ಮಲ್ಕಜೆ, ಚಂದ್ರಶೇಖರ ಕಾಮತ್‌, ಕಿರಣ್‌ ಬುಡ್ಲೆಗುತ್ತು, ಮಜೀದ್‌ ಅ ಡ್ಕಾರ್‌, ಆನಂದ ಕೆಂಬಾರೆ, ಇಸಾಕ್‌ ಸಾಹೇಬ್‌ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್‌ ಅಂಬೆಕಲ್ಲು ನಿರೂಪಿಸಿ, ಶ್ರೀಹರಿ ಕುಕ್ಕುಡೇಲು ವಂದಿಸಿದರು.

ಮಾಜಿ ಶಾಸಕ ಕಾಂಗ್ರೆಸ್‌ 
ಮಾಜಿ ಶಾಸಕ ಕೆ. ಕುಶಲ ಸಹಿತ ದೇವಚಳ್ಳ, ಐವರ್ನಾಡು ಮತ್ತು ಇತರ ಗ್ರಾಮಗಳಿಂದ 67 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆಗೊಂಡರು.

ಮಾಜಿ ಬಾಕ್‌ ಅಧ್ಯಕ್ಪರು ಮಾತಿಗೆ ನಿಂತಾಗಲೇ ಸಭೆ ಗಪ್‌ಚುಪ್‌ 
ಸಮಾವೇಶದಲ್ಲಿ ವೆಂಕಪ್ಪ ಗೌಡರಿಗೆ ಮಾತನಾಡಲು ಅವಕಾಶ ದೊರೆತು ಎದ್ದುನಿಂತಾಗ ಸಭೆ ಗಪ್‌ಚುಪ್‌ ಎಂದಿದ್ದು ಕುತೂಹಲ, ತಳಮಳದಿಂದ ಮೌನವಾಗಿತ್ತು. ಬಳಿಕ ಅವರ ಪ್ರತೀ ಮಾತಿಗೆ ಸಭೆಯಿಂದ ಭಾರೀ ಕರತಾಡನ ಮೊಳಗುತ್ತಲೇ ಇತ್ತು. ಸಭೆಯನ್ನುದೇªಶಿಸಿ ಮಾತನಾಡಿದ ಅವರು, ಹಿಂದಿನ ಚುನಾವಣೆ ಸಂದರ್ಭ ತನಗೆ ಹೆಗಲಿಗೆ ಹೆಗಲು ಕೊಟ್ಟು ಅಧ್ಯಕ್ಷ ಜಯಪ್ರಕಾಶ್‌ ರೈ ದುಡಿದಿದ್ದಾರೆ. ಅದೇ ರೀತಿ ತಾನು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷಸಂಘಟನೆಗಾಗಿ ಶ್ರಮಿಸುವೆ. ಮುಂದೆ ನಿಮ್ಮ (ಜಯಪ್ರಕಾಶ್‌) ನೇತೃತ್ವದಲ್ಲಿ ಗೆಲುವು ದೊರೆತರೆ ತಾನು ಮತ್ಸರಪಡುವವನಲ್ಲ ಎಂದರು. ವೇದಿಕೆಯಲ್ಲಿ ಇಬ್ಬರು ಅಕ್ಕಪಕ್ಕ ಕುಳಿತು ನಗುಮುಖ, ಆತ್ಮೀಯತೆಯಿಂದಲೇ ಇದ್ದರು. ವೇದಿಕೆಯಲ್ಲಿದ್ದವರ ಸಹಿತ ಕಾರ್ಯಕರ್ತರು ಗಮನಿಸುತ್ತಲೇ ಇಬ್ಬರು ನಾಯಕರ ಬಗ್ಗೆ ಸಂತಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next