Advertisement

ಲೋಕಸಭೆ ಸ್ಥಾನಗಳು 1 ಸಾವಿರಕ್ಕೇರಿಕೆ?

11:17 PM Jul 26, 2021 | Team Udayavani |

ಹೊಸದಿಲ್ಲಿ: “ಕೇಂದ್ರ ಸರಕಾರ ಲೋಕಸಭೆಯಲ್ಲಿನ ಸ್ಥಾನಗಳ ಸಂಖ್ಯೆಯನ್ನು 1 ಸಾವಿರಕ್ಕೆ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಹೇಳಿಕೊಂಡಿದ್ದಾರೆ.

Advertisement

2024ರ ಲೋಕಸಭೆ ಚುನಾವಣೆ ವೇಳೆಗೆ ಲೋಕಸಭೆ  ಸ್ಥಾನಗಳನ್ನು 1 ಸಾವಿರಕ್ಕೆ ಏರಿಕೆ ಮಾಡುವ ನಿರ್ಧಾರ ಅನುಷ್ಠಾನವಾಗಬಹುದು ಎಂದು “ಎಎನ್‌ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಂದಹಾಗೆ, ಹೊಸ ಸಂಸತ್‌ ಭವನದ ಕಾಮಗಾರಿ ನಡೆಯುತ್ತಿದ್ದು, ಅದು 2022ರಲ್ಲಿ ಮುಕ್ತಾಯವಾಗಲಿದೆ.  ಲೋಕಸಭೆಯ ಸದಸ್ಯ ಸ್ಥಾನಗಳನ್ನು 1 ಸಾವಿರ ಅಥವಾ ಅದನ್ನೂ ಮೀರಿ ಹೆಚ್ಚಿಸಲು ಚರ್ಚೆಗಳು ನಡೆದಿವೆ. 2019ರಲ್ಲಿ ಪ್ರಣವ್‌ ಮುಖರ್ಜಿ ಲೋಕಸಭೆ ಸದಸ್ಯರ ಸ್ಥಾನಗಳನ್ನು ಹಾಲಿ 545ರಿಂದ 1 ಸಾವಿರಕ್ಕೆ ಹೆಚ್ಚಿಸಲು ಸಲಹೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next