Advertisement

ಮೋದಿ ಗಿಫ್ಟ್ 5 ಲಕ್ಷಕ್ಕೆ ಹರಾಜು

12:30 AM Jan 29, 2019 | |

ಹೊಸದಿಲ್ಲಿ: ಪ್ರಧಾನಿ ಮೋದಿಗೆ ನೀಡಲಾಗಿದ್ದ ಉಡುಗೊರೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ಮುಗಿದಿದ್ದು, ಎರಡು ಉಡುಗೊರೆಗಳಿಗೆ ಗರಿಷ್ಠ ತಲಾ 5 ಲಕ್ಷ ರೂ. ಬಿಡ್‌ ಮಾಡಲಾಗಿದೆ. ಬಸವೇಶ್ವರರ ಪ್ರತಿಮೆ 70 ಸಾವಿರ ರೂ.ಗೆ ಹರಾಜಾಗಿದೆ. 

Advertisement

ರೈಲ್ವೇ ನಿಲ್ದಾಣದಲ್ಲಿ ಬ್ಯಾಗ್‌ ಹಿಡಿದು ಮೋದಿ ನಿಂತಿರುವ ಚಿತ್ರ ಹಾಗೂ ಮರದ ಬೈಕ್‌ ತಲಾ 5 ಲಕ್ಷ ರೂ. ಗಳಿಸಿದೆ. ಕಲಾಕೃತಿಗೆ 50 ಸಾವಿರ ರೂ. ಹಾಗೂ ಮರದ ಬೈಕ್‌ಗೆ 40 ಸಾವಿರ ರೂ. ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಹರಾಜಿಗೆ ಇಡಲಾಗಿದ್ದ ಒಟ್ಟು 19 ಸಾವಿರ ಸಾಮಗ್ರಿಗಳ ಪೈಕಿ 270 ಸಾಮಗ್ರಿಗಳು ಬಿಕರಿಯಾಗಿದ್ದು, ಮಂಗಳವಾರದಿಂದ ಆನ್‌ಲೈನ್‌ ಹರಾಜು ಆರಂಭವಾಗಲಿದೆ. ಆನ್‌ಲೈನ್‌ನಲ್ಲಿ ವಿದೇಶಗಳೂ ಸಹಿತ ಎಲ್ಲೆಡೆಯಿಂದ ಬಿಡ್‌ ದಾಖಲಾಗುವ ನಿರೀಕ್ಷೆಯಿದ್ದು, ಇನ್ನಷ್ಟು ಮೊತ್ತ ಸಂಗ್ರಹವಾಗಲಿದೆ. ಈ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ವಿನಿಯೋಗಿಸಲಾಗುತ್ತದೆ.

ಬಸವೇಶ್ವರರ ಪ್ರತಿಮೆಗೆ 70,000 ರೂ.
ಬೈಕ್‌, ಪೇಂಟಿಂಗ್‌ಗೆ ಗರಿಷ್ಠ ಮೊತ್ತ

Advertisement

Udayavani is now on Telegram. Click here to join our channel and stay updated with the latest news.

Next