Advertisement

ಕಲ್ಯಾಣ್ ಸಿಂಗ್ ಅವರ ರಾಮಮಂದಿರ ಕನಸನ್ನು ಮೋದಿ ಈಡೇರಿಸಿದ್ದಾರೆ: ಶಾ

10:10 PM Aug 21, 2023 | Team Udayavani |

ಅಲಿಗಢ: ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ರಾಮ ಮಂದಿರದ ವಿಚಾರವನ್ನು ಎಳೆದು ತರುತ್ತಲೇ ಇದ್ದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಅದರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಕನಸನ್ನು ನನಸಾಗಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

Advertisement

ಕಲ್ಯಾಣ್ ಸಿಂಗ್ ಅವರ ಎರಡನೇ ಪುಣ್ಯತಿಥಿಯ ಅಂಗವಾಗಿ ಇಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಶಾ, ಹಿಂದುಳಿದವರು ಮತ್ತು ಬಡವರನ್ನು ಸಬಲೀಕರಣಗೊಳಿಸುವ ಹಿರಿಯ ನಾಯಕನ ಆಶಯವನ್ನು ಮೋದಿ ಸರಕಾರ ಈಡೇರಿಸಿದೆ ಎಂದರು.

ಒಂಬತ್ತು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಸಮಗ್ರ ಸಬಲೀಕರಣಕ್ಕಾಗಿ ಹಲವು ಕೆಲಸಗಳನ್ನು ಕೈಗೊಂಡು ಶ್ರಮಿಸಿದ ನರೇಂದ್ರ ಮೋದಿಯವರು ಬಾಬೂಜಿ (ಕಲ್ಯಾಣ್ ಸಿಂಗ್) ರೂಪಿಸಿದ ಆರಂಭಕ್ಕೆ ರೂಪು ನೀಡಿದ್ದಾರೆ.

ಸಿಂಗ್ ಅವರ ಪುಣ್ಯತಿಥಿಯನ್ನು ಬಿಜೆಪಿಯು ‘ಹಿಂದೂ ಗೌರವ್ ದಿವಸ್’ ಎಂದು ಆಚರಿಸುತ್ತಿದೆ, 2024 ರಲ್ಲಿ ಉತ್ತರ ಪ್ರದೇಶದ ಎಲ್ಲಾ 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವಂತೆ ಮಾಡಿ ಕಲ್ಯಾಣ್ ಸಿಂಗ್ ಅವರಿಗೆ ಗೌರವ ಸಲ್ಲಿಸುವಂತೆ ಪಕ್ಷದ ಕಾರ್ಯಕರ್ತರನ್ನು ಶಾ ಒತ್ತಾಯಿಸಿ, ಬಾಬೂಜಿಯವರಿಗೆ ಇದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಬೇರೊಂದಿಲ್ಲ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ, ಉತ್ತರ ಪ್ರದೇಶ ಬಿಜೆಪಿಯ ಅಭೇದ್ಯ ಕೋಟೆ ಎಂಬ ಸಂದೇಶವನ್ನು ದೇಶಕ್ಕೆ ರವಾನಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next