Advertisement

ಚುನಾವಣಾ ವೇಳಾಪಟ್ಟಿಗೆ ಮುನ್ನ ನಾಲ್ಕು ಬಾರಿ ರಾಜ್ಯಕ್ಕೆ ಮೋದಿ

06:00 AM Feb 07, 2018 | |

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಕಳೆದ ಭಾನುವಾರ ಬೆಂಗಳೂರಿಗೆ ಬಂದು ರಾಜಕೀಯ ಬಿರುಗಾಳಿ ಎಬ್ಬಿಸಿ ಹೋಗಿದ್ದ
ಪ್ರಧಾನಿ ನರೇಂದ್ರ ಮೋದಿ ಮುಂಬರುವ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮುನ್ನ ಮತ್ತೆ ನಾಲ್ಕು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ.

Advertisement

ಫೆ. 27ರಂದು ದಾವಣಗೆರೆಗೆ ಬರಲಿದ್ದು, ರೈತ ಮಿತ್ರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಕಲಬುರಗಿ, ರಾಯಚೂರು ಮತ್ತು ಮೈಸೂರು ಭಾಗದಲ್ಲಿ ನಡೆಯಲಿರುವ ಪಕ್ಷದ ವಿವಿಧ ಸಮಾವೇಶಗಳಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಈ ಎಲ್ಲಾ ಸಮಾವೇಶಗಳು ನಡೆಯಲಿವೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಕರ್ನಾಟಕದತ್ತ ಗಮನ ಕೇಂದ್ರೀಕರಿಸಲಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕವೂ ಸಾಕಷ್ಟು ಕಡೆ ಪ್ರಚಾರಸಭೆಗಳನ್ನು
ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಎಸ್‌ವೈ ಜನ್ಮದಿನ: ಫೆ. 27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನವಾಗಿದ್ದು, ಅಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ದಾವಣಗೆರೆಯಲ್ಲಿ ರೈತಮಿತ್ರ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದ ಮೂಲಕ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಶ್ರದಾಟಛಿಂಜಲಿ ಸಲ್ಲಿಸುವುದರ ಜತೆಗೆ ರೈತರನ್ನು ಬಿಜೆಪಿ ಪರವಾಗಿ ಒಟ್ಟುಗೂಡಿಸುವ ಕೆಲಸವೂ ನಡೆಯಲಿದೆ. ಪ್ರಧಾನಿ ಮೋದಿ ಅವರೇ ಇದರ ನೇತೃತ್ವ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next