Advertisement

ಟ್ವಿಟರ್‌: 55 ಹೆಣ್ಮಕ್ಕಳ ಹಿಂಬಾಲಿಸಿದ ಮೋದಿ

10:21 AM Aug 27, 2018 | Team Udayavani |

ಹೊಸದಿಲ್ಲಿ: ರಕ್ಷಾ ಬಂಧನದ ನಿಮಿತ್ತ ಪ್ರಧಾನಿ ಮೋದಿ 55 ಮಹಿಳೆಯರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಕ್ರೀಡಾಪಟುಗಳು, ಬಿಜೆಪಿ ನಾಯಕಿಯರು ಹಾಗೂ ಮಾಧ್ಯಮದ ವ್ಯಕ್ತಿಗಳೂ ಸೇರಿದಂತೆ ಇತರರನ್ನು ಫಾಲೋ ಮಾಡಿ, ಅವರಿಗೆ ರಕ್ಷಾ ಬಂಧನದ ಶುಭಾಶಯ ಹೇಳಿದ್ದಾರೆ.

Advertisement

ಸದ್ಯ ಮೋದಿ 2 ಸಾವಿರ ಜನರನ್ನು ಫಾಲೋ ಮಾಡುತ್ತಿದ್ದು, ಮೋದಿಯವರನ್ನು 4.37 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಕ್ರೀಡಾಪಟುಗಳಾದ ಅಶ್ವಿ‌ನಿ ಪೊನ್ನಪ್ಪ, ಸಾನಿಯಾ ಮಿರ್ಜಾ, ಕರ್ಮನ್‌ ಕೌರ್‌, ಪಿ.ಟಿ.ಉಷಾ, ಮಾಜಿ ಮಿಸ್‌ ಇಂಡಿಯಾ ಸ್ವರೂಪ್‌, ಪತ್ರಕರ್ತೆ ರೋಮನ ಇಸಾರ್‌ ಖಾನ್‌, ಶ್ವೇತಾ ಸಿಂಗ್‌, ಪದ್ಮಜಾ ಜೋಶಿ, ಶೀಲಾ ಭಟ್‌, ಶಾಲಿನಿ ಸಿಂಗ್‌ ಹಾಗೂ ಇತರರನ್ನು ಮೋದಿ ಫಾಲೋ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next