Advertisement

“ಮೋದಿ ಹೆಲಿಕಾಪ್ಟರ್‌ ತಪಾಸಣೆ ಮಾಡಿಲ್ಲ’

11:15 PM Apr 15, 2019 | Team Udayavani |

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿಯವರು ಏ.9ರಂದು ಚಿತ್ರದುರ್ಗಕ್ಕೆ ಪ್ರಚಾರಕ್ಕೆ ಆಗಮಿಸಿದ ವೇಳೆ ಪತ್ತೆಯಾಗಿದ್ದ “ಬ್ಲ್ಯಾಕ್‌ ಬಾಕ್ಸ್‌’ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ವಿನೋತ್‌ ಪ್ರಿಯಾ ಸ್ಪಷ್ಪನೆ ನೀಡಿದ್ದು, ಮೋದಿ ಪ್ರಯಾಣಿಸಿದ ಹೆಲಿಕಾಪ್ಟರ್‌ ತಪಾಸಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

Advertisement

ಇಲ್ಲಿನ ಉಪವಿಭಾಗಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿಗಳ ಚಿತ್ರದುರ್ಗ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸೂಟ್‌ಕೇಸ್‌ ವಿವಾದಕ್ಕೆ ಸಂಬಂ ಧಿಸಿದಂತೆ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಪ್ರಕಟವಾಗಿವೆ.

ಪ್ರಧಾನ ಮಂತ್ರಿಗಳಂತಹ ಅತಿ ಗಣ್ಯ ವ್ಯಕ್ತಿಗಳು ಎಸ್‌ಪಿಜಿ ಭದ್ರತೆಯ ವ್ಯಾಪ್ತಿಯಲ್ಲಿ ಇರುತ್ತಾರೆ. ನಿಯಮದ ಪ್ರಕಾರ ಎಫ್‌ಎಸ್‌ಟಿ ತಂಡದಿಂದ ತಪಾಸಣೆ ಮಾಡಲಾಗಿದೆ ಎಂದರು. ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರಧಾನ ಮಂತ್ರಿಗಳು, ಭಯೋತ್ಪಾದಕರಿಂದ ಜೀವ ಬೆದರಿಕೆ ಎದುರಿಸುತ್ತಿರುವ ಹಾಗೂ ಅತಿ ಭದ್ರತೆ ವ್ಯಾಪ್ತಿಗೆ ಬರುವ ರಾಜಕೀಯ ನಾಯಕರಿಗೆ ಹೆಲಿಕಾಪ್ಟರ್‌ ಹಾಗೂ ವಿಮಾನಗಳ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ.

ಹಾಗಾಗಿ, ನಾವು ತಪಾಸಣೆ ಮಾಡುವಂತಿಲ್ಲ. ಅದೇ ರೀತಿ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಮಾರ್ಗಸೂಚಿ ಅನ್ವಯ ಎಸ್‌ಪಿಜಿ ಭದ್ರತೆ ವ್ಯಾಪ್ತಿಯಲ್ಲಿದ್ದ ಹೆಲಿಕಾಪ್ಟರ್‌ಗೆ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ. ಆ ಮೂಲಕ ಚುನಾವಣಾ ಆಯೋಗದ ಮಾರ್ಗಸೂಚಿಯನ್ನೇ ಜಿಲ್ಲೆಯಲ್ಲಿ ಪಾಲಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಮಾತನಾಡಿ, ಪ್ರಧಾನ ಮಂತ್ರಿಗಳ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಎಸ್‌ಪಿಜಿ ಭದ್ರತಾ ತಂಡದವರು ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿದ ಸೂಟ್‌ಕೇಸ್‌ನಲ್ಲಿ ಭದ್ರತೆಗೆ ಸಂಬಂ ಧಿಸಿದ ಉಪಕರಣಗಳಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲ ವಾಹನಗಳ ತಪಾಸಣೆಯನ್ನು ಎಫ್‌ಎಸ್‌ಟಿ ತಂಡ ನಿಯಮಾನುಸಾರ ಮಾಡಿದೆ ಎಂದರು.

Advertisement

ಸೂಟ್‌ಕೇಸ್‌ ಸಾಗಿಸಿದ ವಾಹನ ತಪಾಸಣೆ: ಮಾಧ್ಯಮದವರ ಅನೇಕ ಪ್ರಶ್ನೆಗಳಿಗೆ ಜಿಲ್ಲಾ ಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಪ್ರಧಾನ ಮಂತ್ರಿಗಳು ಎಸ್‌ಪಿಜಿ ಭದ್ರತೆ ವ್ಯಾಪ್ತಿಗೆ ಬರುವುದರಿಂದ ಹೆಲಿಕಾಪ್ಟರ್‌ ಪರಿಶೀಲನೆ ಮಾಡಲಿಲ್ಲ.

ಅಲ್ಲದೆ, ಹೆಲಿಕಾಪ್ಟರ್‌ನಿಂದ ಇಳಿಸಲಾದ ಬ್ಲಾಕ್‌ಬಾಕ್ಸ್‌ (ಸೂಟ್‌ಕೇಸ್‌) ಕೂಡ ಪರಿಶೀಲಿಸಲಿಲ್ಲ, ಸೂಟ್‌ಕೇಸ್‌ ಸಾಗಿಸಿದ ವಾಹನವನ್ನು ಮಾತ್ರ ಪರಿಶೀಲಿಸಲಾಗಿದೆ. ಒಟ್ಟು 11 ವಾಹನಗಳಿಗೆ ಅನುಮತಿ ನೀಡಲಾಗಿದ್ದು, ಸೂಟ್‌ಕೇಸ್‌ ಸಾಗಿಸಿದ ವಾಹನವನ್ನೂ ಪರಿಶೀಲಿಸಲಾಗಿದೆ. ಈ ವಾಹನ ಜಿಲ್ಲಾಡಳಿತಕ್ಕೆ ಸಂಬಂ ಧಿಸಿದ್ದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next