Advertisement
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಎಲ್ಲ ಸಂಸದರು ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಯುವಕರ ಮೇಲೆ ಮೋದಿ ಹೆಸರನ್ನು ಹೇರಿಕೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಅವರು ಮಾತೆತ್ತಿದರೆ ಭಾರತ ಬಲಿಷ್ಠ ದೇಶವಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ ಭಾರತ ಯಾವಾಗ ದುರ್ಬಲ ದೇಶವಾಗಿತ್ತು ಎಂದು ಅವರು ಪ್ರಶ್ನಿಸಿದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆಯಲ್ಲಿಯೂ ಭಾರತ-ಪಾಕಿಸ್ಥಾನ ನಡುವೆ ಯುದ್ಧವಾಗಿ ಭಾರತ ಗೆಲುವು ಸಾಧಿಸಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ 12 ಬಾರಿ ಸರ್ಜಿಕಲ್ ಸ್ಟ್ರೆ çಕ್ ನಡೆದಿತ್ತು. ಆದರೆ ನರೇಂದ್ರ ಮೋದಿ ಅವರ ರೀತಿಯಲ್ಲಿ ಅದನ್ನು ಚುನಾವಣೆಯ ಅಸ್ತ್ರವನ್ನಾಗಿ ಬಳಸಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಭಾವನಾತ್ಮಕ ವಿಚಾರವನ್ನು ಚುನಾವಣೆಯ ಅಸ್ತ್ರವನ್ನಾಗಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಜಗತ್ತಿನಲ್ಲಿ ಹೆಸರು ವಾಸಿಯಾಗಿದೆ. ಹಿಂದೂ ಮತ್ತು ಮುಸ್ಲಿಮರನ್ನು ಈ ಜಿಲ್ಲೆಯಲ್ಲಿ ಸೌಹಾರ್ದದಿಂದ ಬದುಕಲು ಬಿಡಿ ಎಂದು ಹೇಳಿದರು. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸಂವಿಧಾನದ 375 ಮತ್ತು 35ನೇ ವಿಧಿ, ರಾಮ ಮಂದಿರದ ವಿಚಾರ ಮಾತ್ರ ಪ್ರಸ್ತಾವವಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಡಾಲರ್‌ಗೆ 55 ರೂ. ಇತ್ತು. ಇದೀಗ 70 ರೂ. ಆಗಿದೆ. ಅಡುಗೆ ಅನಿಲ ಸಿಲಿಂಡರ್‌ಗೆ 450 ರೂ. ಇತ್ತು, ಇದೀಗ 700 ರೂ. ತಲುಪಿದೆ. ಲಾಭದಲ್ಲಿದ್ದ ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳಿಸಿದ್ದು ನಳಿನ್ ಕುಮಾರ್ ಕಟೀಲು ಅವರ ಸಾಧನೆ. ಬ್ಯಾಂಕ್ ವಿಲೀನ ವಿಷಯದಲ್ಲಿ ನಳಿನ್ ಅವರು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು ಎಂದು ತಿಳಿಸಿದರು.
Related Articles
Advertisement
ಸತ್ಯ-ಅಸತ್ಯಗಳ ಚುನಾವಣೆಸಚಿವೆ ಜಯಮಾಲಾ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯು ಸತ್ಯ-ಅಸತ್ಯ, ಅಸಲಿ-ನಕಲಿ ನಡುವೆ ನಡೆಯುವ ಚುನಾವಣೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡಿದೆ. ಜಾಹಿರಾತಿಗಾಗಿ ಲಕ್ಷಾಂತರ ರೂ. ವ್ಯಯಿಸುತ್ತಿದೆ ಎಂದರು. ಕಾಂಗ್ರೆಸ್ ಮುಖಂಡರ ಮೇಲೆ ಐಟಿ ಅಸ್ತ್ರ ಪ್ರಯೋಗಿಸುತ್ತಿದೆ. ಆದರೆ
ಇತ್ತೀಚೆಗೆ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿದ್ದ ಹೆಲಿಕಾಪ್ಟರ್
ನಿಂದ ಬಾಕ್ಸ್ ಒಂದನ್ನು ಕಾರಿನಲ್ಲಿ ಸಾಗಿಸಿದ್ದು, ಅದರಲ್ಲಿ ಏನಿತ್ತು ಎಂಬುವುದರ ಬಗ್ಗೆ ತನಿಖೆಯಾಗಬೇಕಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಸಭಾ ಕ್ಷೇತ್ರದ ಸಂಸದರು ಕಿಂಚಿತ್ತೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಎರಡೂ ಕ್ಷೇತ್ರದಲ್ಲಿ ಹತ್ತಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು. ಸಂಸದರಾದವರಿಗೆ ಭಾಷಾ ಜ್ಞಾನ ಅತೀ ಮುಖ್ಯ. ಯಾವುದೇ ಸಮಸ್ಯೆ
ಗಳನ್ನು ಚರ್ಚೆ ಮಾಡುವಾಗ ಇಲ್ಲಿನ ಸಂಸದರಿಗೆ ಭಾಷೆಯ ಸಮಸ್ಯೆ ಎದು
ರಾಗುತ್ತದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರನ್ನು ಜನ ಬೆಂಬಲಿಸಬೇಕು ಎಂದರು. ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜಾ, ವಿಶ್ವಾಸ್‌ಕುಮಾರ್ ದಾಸ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಸಲೀಂ, ಶಕೀಲ್ ಉಪಸ್ಥಿತರಿದ್ದರು. ಸಿ.ಟಿ. ರವಿಗೆ ಪುಸ್ತಕ ಪಾರ್ಸೆಲ್
ಜಯಮಾಲಾ ಮಾತನಾಡಿ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ಹೆಣ್ಣಿನ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಬಳಕೆ ಮಾಡಿದ್ದು, ಖಂಡನೀಯ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ. ಇದು ಸಿ.ಟಿ. ರವಿ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಹೆಣ್ಣನ್ನು ಲಘುವಾಗಿ ಕಾಣುವ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ. ಮಕ್ಕಳಿಗೆ ತಾಯಿ ಹೇಳುವ ನೀತಿ ಕಥೆ ಮತ್ತು ಮಾತೃತ್ವದ ಮಹತ್ವ ತಿಳಿಸುವ ಎರಡು ಪುಸ್ತಕಗಳನ್ನು ಸಿ.ಟಿ. ರವಿ ಅವರಿಗೆ ಪಾರ್ಸೆಲ್ ಮಾಡುತ್ತೇವೆ ಎಂದರು.