Advertisement

‘ಮಿನಿ ಪಾಕಿಸ್ತಾನ್’ಎಂದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ? : ಮಮತಾ ವಾಗ್ಬಾಣ

11:12 AM Apr 09, 2021 | Team Udayavani |

ಕೊಲ್ಕತ್ತಾ : ದೇಶದ ಪ್ರಧಾನಿ ಹಿಂದೂ ಹಾಗೂ ಮುಸ್ಲಿಂ ರನ್ನು ವಿಭಜಿಸುವುದರ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಳೆಯುತ್ತಿದ್ದಾರೆ ಎಂದು ತೃಣ ಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

Advertisement

ಡೊಮ್ಜೂರ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಹತ್ತು ಚುನಾವಣಾ ಪ್ರಚಾರ ಸಭಾ ಕಾರಣದಿಂದಾಗಿ ನಾನು ಚುನಾವಣಾ ಆಯೋಗದಿಂದ ನೋಟೀಸ್ ಪಡೆದರೂ ಕೂಡ, ನಾನು ಎಲ್ಲರಿಗೂ ಮತವನ್ನು ಚಲಾಯಿಸಿ ಎಂದು ಹೇಳಿದ್ದೇನೆ ಹೋರತು ಬೇರೇನೂ ಹೇಳಿಲ್ಲ. ನನ್ನಲ್ಲಿ ಯಾವುದೇ ವಿಭಜನೆಗೆ ಅವಕಾಶವಿಲ್ಲ. ಎಷ್ಟು ಪ್ರಕರಣಗಳು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಖಲಾಗಿವೆ..? ಯಾಕೆ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲ..? ಎಂದು ಅವರು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಓದಿ : ನೆನಪಿರಲಿ..ನಿಮ್ಮನ್ನು ಪ್ರಶ್ನಿಸುವವರು ನೀವೇ ಆಗಬೇಕು..!

ತೃಣಮೂಲ ಕಾಂಗ್ರೆಸ್ ಗೆ  ಸಾಮೂಹಿಕವಾಗಿ ಮತ ಚಲಾಯಿಸುವಂತೆ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ ನಂತರ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗ ಬ್ಯಾನರ್ಜಿಗೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಮಮತಾ, ಚುನಾವಣಾ ಆಯೋಗ ಅಮಿತ್ ಶಾ ಹೇಳಿದಂತೆ ನಡೆದುಕೊಳ್ಳುತ್ತಿದೆ. ಅಮಿತ್ ಶಾ ಚುನಾವಣಾ ಆಯೋವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು, ಬಿಜೆಪಿ ಸ್ಟಾರ್ ಪ್ರಚಾರಕ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾಕೆ ಯಾವುದೇ ದೂರು ದಾಖಲಾಗಿಲ್ಲ..? ಅವರು ಭಾಷಣ ಮಾಡುವಾಗ ಹಿಂದೂ ಮತ್ತು ಮುಸ್ಲಿಂ ಮತ ಬ್ಯಾಂಕುಗಳ ಬಗ್ಗೆ ಆಗಾಗ್ಗೆ ಉಲ್ಲೇಖಗಳನ್ನು ನೀಡುತ್ತಾರೆ ಎಂದು ಆರೋಪಿಸಿದರು.

Advertisement

ಪ್ರತಿದಿನ ಹಿಂದೂ ಮತ್ತು ಮುಸ್ಲಿಂ ಬಗ್ಗೆ ಮಾತನಾಡುವ ನರೇಂದ್ರ ಮೋದಿಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಯಾಕೆ? ನಂದಿಗ್ರಾಮ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಮಿನಿ ಪಾಕಿಸ್ತಾನ್’ ಎಂಬ ಪದವನ್ನು ಉಚ್ಚರಿಸಿದವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ? “ಎಂದು ಬ್ಯಾನರ್ಜಿ ವಾಗ್ಬಾಣ ಬಿಟ್ಟಿದ್ದಾರೆ.

ಓದಿ : ಪುತ್ತೂರು: ಮೊಬೈಲ್ ಫೋನ್ ಸುಟ್ಟು ಹಾಕಿ ರಿಕ್ಷಾ ಚಾಲಕ ಆತ್ಮಹತ್ಯೆ!

Advertisement

Udayavani is now on Telegram. Click here to join our channel and stay updated with the latest news.

Next