Advertisement

Rahul Gandhi ಜತೆಗೆ ಚರ್ಚಿಸಲು ಮೋದಿ ಧೈರ್ಯ ಮಾಡಿಲ್ಲ: ಜೈರಾಂ ರಮೇಶ್‌

11:43 PM May 12, 2024 | Team Udayavani |

ಹೊಸದಿಲ್ಲಿ: ರಾಹುಲ್‌ ಗಾಂಧಿ ಅವರ ಜತೆಗೆ ಬಹಿರಂಗ ಚರ್ಚೆ ನಡೆಸುವ ಆಹ್ವಾನವನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಯೇ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಬಹಿರಂಗ ಚರ್ಚೆಗೆ ನೀಡಲಾಗಿದ್ದ ಆಹ್ವಾನವನ್ನು ರಾಹುಲ್‌ ಗಾಂಧಿ ಸ್ವೀಕರಿಸಿ 1 ದಿನ ಕಳೆದಿದೆ. ಆದರೆ 56 ಇಂಚಿನ ಎದೆಯ ವ್ಯಕ್ತಿ ಮಾತ್ರ ಆಹ್ವಾನ ಸ್ವೀಕರಿಸಿಲ್ಲ. ಟಿ.ವಿ. ಚಾನೆಲ್‌ಗ‌ಳಿಗೆ ಮೋದಿ ನೀಡುವ ಸಂದರ್ಶನಗಳೆ ಲ್ಲವೂ ಬರೀ ನಾಟಕಗಳು. ದೇಶದ ಸಮಸ್ಯೆಗಳ ಬಗ್ಗೆ ಅವರಿಗೆ ಕೇಳುವ ಎಲ್ಲ ಪ್ರಶ್ನೆಗಳು, ಉತ್ತರಗಳೆಲ್ಲವೂ ಪೂರ್ವ ನಿರ್ಧರಿತ. ಇಲ್ಲಿಯವರೆಗೆ ಮಾಧ್ಯಮಗಳು ಮೋದಿಯನ್ನು ಏಕಾಏಕಿ ಪ್ರಶ್ನೆ ಮಾಡಿದ್ದೇ ಇಲ್ಲ ಎಂದಿದ್ದಾರೆ.

Advertisement

ರಾಹುಲ್‌ “ಇಂಡಿಯಾ’ ಕೂಟದ ಪ್ರಧಾನಿ ಅಭ್ಯರ್ಥಿಯೇ?
ಪ್ರಸಕ್ತ ಸಾಲಿನ ಚುನಾವಣೆಗೆ ಸಂಬಂಧಿ ಸಿದಂತೆ ಪ್ರಧಾನಿ ಜತೆಗೆ ರಾಹುಲ್‌ ಗಾಂಧಿ ಚರ್ಚೆ ನಡೆಸಬಹುದು ಎಂಬ ಸಲಹೆಯನ್ನು ಒಪ್ಪಿಕೊಂಡ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರನ್ನು ಕೇಂದ್ರ ಸಚಿವೆ ಸ್ಮತಿ ಇರಾನಿ ಟೀಕಿಸಿ ದ್ದಾರೆ. ರಾಹುಲ್‌ ಗಾಂಧಿಯ ವರೇನು ಇಂಡಿಯಾ ಒಕ್ಕೂ ಟದ ಪ್ರಧಾನಿ ಅಭ್ಯ ರ್ಥಿಯೇ? ಅಮೇಠಿಯಲ್ಲೇ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ಎದುರು ಸ್ಪರ್ಧಿಸಲೂ ರಾಹುಲ್‌ ಅಂಜುತ್ತಾರೆ. ಇಷ್ಟು ಮಾತ್ರವಲ್ಲದೆ ವಯನಾಡ್‌ ಸಂಸದ ರಾಹುಲ್‌ ಗಾಂಧಿಯವರಿಗೆ ಪ್ರಧಾನಿ ಎದುರಾಗಿ ಮಾತನಾಡುವಷ್ಟು ತಿಳಿವಳಿಕೆ ಇದೆಯೇ ಎಂದು ಸಚಿವೆ ಸ್ಮತಿ ಇರಾನಿ ಪ್ರಶ್ನಿಸಿದ್ದಾರೆ.

ಮೋದಿ ಗೆದ್ದರೆ ದಲಿತರು ಸೇವಕರಾಗಬೇಕಾಗುತ್ತದೆ:  ಖರ್ಗೆ
ಮುಂಬಯಿ: “ದೇಶದ ಆಡಳಿತವನ್ನು ಮೂರನೇ ಬಾರಿಯೂ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕೈಗಿಟ್ಟರೆ ಆ ಇಬ್ಬರೂ ಸೇರಿ ಬಡವರು, ದಲಿತರು ಮತ್ತು ಬುಡಕಟ್ಟು ಜನಂಗಾದವರನ್ನು ಸೇವಕರಂತೆ ನಡೆಸಿಕೊಳ್ಳುತ್ತಾರೆ’ ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, “ಸ್ವಾತಂತ್ರ್ಯಕ್ಕೂ ಮುನ್ನ ದಲಿತರು, ದಮನಿತ ರನ್ನು ಸೇವಕರಂತೆ ನಡೆಸಿಕೊಳ್ಳಲಾಗುತ್ತಿತ್ತು. ನೀವೇ ನಾದರೂ 3ನೇ ಅವಧಿಯ ಅಧಿಕಾರವನ್ನೂ ಕೊಟ್ಟರೆ ಅದೇ ಪರಿಸ್ಥಿತಿ ಮರಳಲಿದೆ. ಅಲ್ಲದೆ ನೀವು ನಿಮ ಗಾಗಿ ನಿಮ್ಮವರಿಗಾಗಿ ಈ ಬಾರಿ ಮತದಾನ ಮಾಡ ಬೇಕಿದೆ. ಸಂವಿಧಾನ ಇಲ್ಲದಿದ್ದರೆ ನಿಮ್ಮನ್ನು ರಕ್ಷಿಸಲೂ ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next