ಕೊಪ್ಪಳ: ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಗೆ ಅವತಾರ ತಾಳಿದ್ದನೋ ಹಾಗೆ ಭಾರತದ ಪ್ರಗತಿಯಲ್ಲಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ನವ ಭಾರತ ನಿರ್ಮಾಣಕ್ಕೆ ಮೋದಿ ಬಹಳ ಶ್ರಮಿಸುತ್ತಾರೆ. ಮೋದಿ ಜನಪ್ರೀಯತೆ ಸಹಿಸದೆ ಸಿದ್ದರಾಮಯ್ಯ ಅವರು ಮೂರ್ಖರ ರೀತಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಮೋದಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆ ಭಾವನೆಯಿಂದ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ ಎಂದರು.
ನಿಮ್ಮ ಪ್ರಧಾನಿ ಮನ್ ಕೀ ಬಾತ್ ಮಾಡಿದ ಉದಾಹರಣೆ ಇದೆಯಾ? ಕಾಂಗ್ರೆಸ್ ಪ್ರಧಾನಿ ದೆಹಲಿಗೆ ಸೀಮಿತ. ನಮ್ಮ ಪ್ರಧಾನಿ ಹಳ್ಳಿ ಹಳ್ಳಿಗೂ ತಲುಪಿದ್ದಾರೆ. ಗ್ರಾಪಂ ಸದಸ್ಯನ ಜೊತೆ ಮಾತನಾಡುತ್ತಿದ್ದಾರೆ ಎಂದರು.
ಅಗ್ನಿಪಥ್ ಯೋಜನೆ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದ್ದಾರೆ. ದೇಶದ ಸೈನಿಕನಾದರೆ, ಅವನಿಗೆ ಅವನದೆಯಾದ ಘನತೆ ಬರತ್ತದೆ ಎಂದರು.
Related Articles
ಇದನ್ನೂಓದಿ:ಸಾರ್ವಜನಿಕರೆದುರೇ ಬಸ್ ಏಜೆಂಟ್ ನ ಬರ್ಬರ ಕೊಲೆ: ಅನೈತಿಕ ಸಂಬಂಧ ಕಾರಣ ಶಂಕೆ
ಸಿದ್ದರಾಮಯ್ಯ ಬಾಗಲಕೋಟೆಗೆ ಡಿಸಿ ತರಾಟೆ ವಿಚಾರಕ್ಕೆ ತಿರುಗೇಟು ನೀಡಿದ ರಾಮುಲು, ಸಿದ್ದರಾಮಯ್ಯ ಸಂಸ್ಕಾರ ಇಲ್ಲದ ವ್ಯಕ್ತಿ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಪ್ರೋಟೋಕಾಲ್ ಪ್ರಕಾರ ಹೆಸರು ಬರಬೇಕಾಗತ್ತದೆ. ಇದೀಗ ಹೆಸರು ಹಾಕಬೇಡಿ ಎಂದಿದ್ದಾರೆ. ಬದಾಮಿ ಜನ ಸಿದ್ದರಾಮಯ್ಯರನ್ನು ತಿರಸ್ಕಾರ ಮಾಡಲಿದ್ದಾರೆ. ಮುಂದಿನ ದಿನ ಕ್ಷೇತ್ರ ಹುಡಕುತ್ತಾ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಮೋದಿಜಿಯವರು 2006 ರಿಂದ 2007 ರಿಂದ ನನಗೂ ಪರಿಚಯ. ಬಹಳ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಾರೆ. ನನ್ನ ಮೇಲೆ ವಿಶೇಷ ಪ್ರೀತಿಯಿದೆ. ದೆಹಲಿಗೆ ಯಾಕೆ ಬಂದಿಲ್ಲ ಎಂದು ಕೇಳಿದರು, ಬರುತ್ತೇಬೆ ಅಂತಾ ಹೇಳಿದ್ದೇನೆ ಎಂದರು.