ಹೈದರಾಬಾದ್: ವಿಧಾನಸಭೆ ಚುನಾ ವಣೆಯ ಹೊಸ್ತಿಲಲ್ಲಿರುವ ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಆಂಧ್ರ ಪ್ರದೇಶ ಪುನಾರಚನೆ ಕಾಯ್ದೆಯಲ್ಲಿ ನೀಡ ಲಾಗಿದ್ದ ಆಶ್ವಾಸನೆಯಂತೆ, ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವ ವಿದ್ಯಾಲಯ ಸ್ಥಾಪಿಸುವುದಾಗಿ ಮೋದಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಅರಶಿಣ ಬೆಳೆಗಾರರ ಹಿತಾಸಕ್ತಿ ಗಮನದಲ್ಲಿಟ್ಟು ಕೊಂಡು ರಾಷ್ಟ್ರೀಯ ಅರಶಿಣ ಮಂಡಳಿ ಯನ್ನು ರಚಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಭಾನುವಾರ ಮೆಹಬೂಬ್‌ನಗರದಲ್ಲಿ 13,500 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತ ನಾಡಿದರು. ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಡಕಟ್ಟು ವಿವಿ ಸ್ಥಾಪಿಸಿ, ಅದಕ್ಕೆ ಬುಡಕಟ್ಟು ದೇವತೆಗಳಾದ “ಸಾಮಕ್ಕ ಮತ್ತು ಸಾರಕ್ಕ” ಎಂದು ಹೆಸರಿಡಲಾಗುವುದು. ಇದಕ್ಕಾಗಿ ಕೇಂದ್ರ ಸರಕಾರ 900 ಕೋಟಿ ರೂ. ವೆಚ್ಚ ಮಾಡಲಿದೆ ಎಂದರು.
ಇನ್ನು, ನಮ್ಮ ಸರಕಾರ ನಿರ್ಮಿ ಸಲಿರುವ ರಾಷ್ಟ್ರೀಯ ಅರಶಿನ ಮಂಡ ಳಿಯು ಅರಶಿನ ಬೆಳೆಗಾರರಿಗೆ ವರದಾನ ವಾಗಲಿದೆ ಎಂದೂ ಮೋದಿ ಹೇಳಿದ್ದಾರೆ. ಈ ಹಿಂದೆ 2 ಬಾರಿ ನಿಜಾಮಾಬಾದ್ ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಅರಶಿನ ಮಂಡಳಿ ಸ್ಥಾಪನೆ ಭಾರೀ ಚರ್ಚೆ ಹುಟ್ಟುಹಾಕಿತ್ತು.
ಅರಶಿನ ಮಂಡಳಿಯು ನಿಜಾಮಾಬಾದ್ ಪ್ರದೇಶದ ರೈತರ ಬಹುಕಾಲದ ಬೇಡಿಕೆಯೂ ಹೌದು. 2019ರ ಚುನಾವಣೆಯಲ್ಲಿ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿ ಕೆ.ಕವಿತಾ ಅವರು ಬಿಜೆಪಿಯ ಡಿ. ಅರವಿಂದ್ ವಿರುದ್ಧ ಸೋಲಲೂ ಇದೇ ಕಾರಣ. ಏಕೆಂದರೆ, “ಕವಿತಾ ಅವರು ಮಂಡಳಿ ಸ್ಥಾಪನೆಯ ಬೇಡಿಕೆ ಈಡೇರಿಸಿಲ್ಲ. ನಾನು ಗೆದ್ದರೆ ಮಂಡಳಿ ಸ್ಥಾಪನೆ ಖಚಿತ’ ಎಂದು ಹೇಳುತ್ತಲೇ ಬಿಜೆಪಿ ಅಭ್ಯರ್ಥಿ ಅರವಿಂದ್ ಪ್ರಚಾರ ಮಾಡಿದ್ದರು.
ಬಿಆರ್‌ಎಸ್ ವಿರುದ್ಧ ಕಿಡಿ: ತಮ್ಮ ಭಾಷಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಕಿಡಿಕಾರಿದ ಮೋದಿ, “ತೆಲಂಗಾಣದ ಜನ ಬದಲಾವಣೆ ಬಯಸಿದ್ದಾರೆ. ಅವರಿಗೆ ಸುಳ್ಳು ಆಶ್ವಾಸನೆಗಳು ಬೇಕಿಲ್ಲ, ನೈಜ ಕೆಲಸಗಳು ಬೇಕಿದೆ. ಹಾಗಾಗಿ, ಈ ಬಾರಿ ಬಿಜೆಪಿ ಸರಕಾರವನ್ನು ಬಯಸುತ್ತಿದ್ದಾರೆ’ ಎಂದರು.
ಹಾಸನ, ರಾಯಚೂರಿಗೂ ಅನುಕೂಲ
2,170 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹಾಸನ-ಚೆರ್ಲಪಳ್ಳಿ ಎಲ್‌ಪಿಜಿ ಪೈಪ್‌ಲೈನ್ ಯೋಜನೆಗೆ ಪ್ರಧಾನಿ ಮೋದಿ ಭಾನುವಾರ ಚಾಲನೆ ನೀಡಿದರು. ಈ ಪೈಪ್‌ಲೈನ್ ಸುರಕ್ಷಿತ, ಅಗ್ಗದ ಮತ್ತು ಪರಿಸರ ಸ್ನೇಹಿ ಮಾದರಿಯಲ್ಲಿ ಎಲ್‌ಪಿಜಿ ಸಾಗಣೆ ಮತ್ತು ವಿತರಣೆಗೆ ನೆರವಾಗಲಿದೆ. ಮೋದಿ ಉದ್ಘಾಟಿಸಿದ 13,500 ಕೋಟಿ ರೂ.ಗಳ ಯೋಜನೆಗಳಲ್ಲಿ ರಾಯಚೂರು-ಹೈದರಾಬಾದ್ ರೈಲು ಸೇವೆಯೂ ಸೇರಿದೆ.