Advertisement

ಮೋದಿ-ಬಿಎಸ್‌ವೈ ಜೋಡಿ ಎತ್ತುಗಳು

12:29 PM Dec 31, 2017 | Team Udayavani |

ಮೈಸೂರು: ಜ.28ರಂದು ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನರೇಂದ್ರಮೋದಿ ಮತ್ತು ಯಡಿಯೂರಪ್ಪ ಅವರು ಜೋಡಿ ಎತ್ತುಗಳಂತೆ, ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು  ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ತಿಳಿಸಿದರು.

Advertisement

ಬೋಗಾದಿಯ ಜಿಎಲ್‌ಎನ್‌ ಕನ್ವೆನನ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ  ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಹೀಗಾಗಿ ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು.

ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ದ್ವಿತೀಯ ಸ್ಥಾನದಲ್ಲಿತ್ತು, ಒಮ್ಮೆ ಸಿದ್ದರಾಮಯ್ಯ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಬೇಕು ಎಂದರು.

ಬಿಜೆಪಿ ಪರ್ವ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಾಗಲಿ, ಒಳ ಒಪ್ಪಂದವಾಗಲಿ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕಿಳಿಸುತ್ತೇವೆ ಎಂದರು. ಸಂಕ್ರಾಂತಿ ನಂತರ ರಾಜ್ಯದಲ್ಲಿ ಬಿಜೆಪಿ ಪರ್ವ ಆರಂಭವಾಗಲಿದೆ. ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಿದರು.

ಬೆಂಕಿ ರಾಮಯ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಕಿರಾಮಯ್ಯ ಎನ್ನುವುದೇ ಸೂಕ್ತ. ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರನ್ನು ಒಡೆದರು. ಮುಂದೆ ಒಕ್ಕಲಿಗ ಮತ್ತಿತರ ಜಾತಿಗೂ ಕೈ ಹಾಕುತ್ತಾರೆ. ಅಧಿಕಾರವಿದ್ದಷ್ಟು ದಿನವು ಒಳ್ಳೆ ಕೆಲಸ ಮಾಡದ ಸಿದ್ದರಾಮಯ್ಯ ಅವರನ್ನು ಯಾರಾದರೂ ಮನೆಗೆ ಕರೆದರೆ ಅವರ ಮನೆಗೇ ಬೆಂಕಿ ಇಡುತ್ತಾರೆ ಎಂದರು.

Advertisement

ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ಕೊಡುತ್ತಿರುವುದಾಗಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ, ಆದರೆ, ಕೇಂದ್ರ ಸರ್ಕಾರ ಪ್ರತಿ ಕೆ.ಜಿಗೆ 21ರೂ. ನೀಡಿ ಖರೀದಿಸಿ ರಾಜ್ಯಕ್ಕೆ ನೀಡಿದ ಅಕ್ಕಿಯನ್ನು ಇಲ್ಲಿ ಸಿದ್ದರಾಮಯ್ಯ ಉಚಿತವಾಗಿ ನೀಡಿ, ಅನ್ನಭಾಗ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ವಿದ್ಯುತ್‌ ಮಿತವ್ಯಯ ಸಾಧಿಸಲು ಸಬ್ಸಿಡಿ ದರದಲ್ಲಿ ಎಲ್‌ಇಡಿ ಬಲ್ಬ್ಗಳನ್ನು ನೀಡಿದರೆ, ರಾಜ್ಯ ಸರ್ಕಾರ ಆ ಬಲ್ಪ್ ಅನ್ನು ನಟಿ ರಮ್ಯ ಕೈಗೆ ಕೊಟ್ಟು ಹೊಸಬೆಳಕು ಎಂದು ಹೇಳಿಕೊಂಡಿದೆ ಎಂದು ಲೇವಡಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಮೈಸೂರು ವಿಭಾಗ ಪ್ರಭಾರಿ ಎಲ್‌. ನಾಗೇಂದ್ರ, ಸಹ ಪ್ರಭಾರಿ ಎನ್‌.ವಿ.ಫ‌ಣೀಶ್‌, ಅರುಣ್‌ಕುಮಾರ್‌ ಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಶಂಕರ್‌ ಇದ್ದರು. 

ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರಿಗೆ ಸಂವಿಧಾನದ ಬಗ್ಗೆ ಅಪಾರ ಗೌರವವಿದೆ. ಆದರೆ, ಸಂವಿಧಾನದ ಕುರಿತು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಲಾಗಿದೆ.
-ಆರ್‌.ಅಶೋಕ, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next