Advertisement
ಉಪರಾಷ್ಟ್ರಪತಿ ಹುದ್ದೆಗೆ ಬಿಜೆಪಿ ನಾಯಕರೊಬ್ಬರನ್ನು ಕೂರಿಸಲು ಇವರಿ ಬ್ಬರೂ ಚಾಣಕ್ಯತಂತ್ರಕ್ಕೆ ಮೊರೆ ಹೋಗಿದ್ದಾರೆ. ಉಪರಾಷ್ಟ್ರಪತಿಯಾಗಿ ಭೈರೋನ್‌ಸಿಂಗ್ ಶೆಖಾವತ್ ಅವರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ಒಂದು ದಶಕದ ನಂತರ ಈ ಗುರುತರ ಹುದ್ದೆಗೆ ಬಿಜೆಪಿಗೆ ಸೇರಿದ ವ್ಯಕ್ತಿಯನ್ನೇ ಕೂರಿಸಲು ಇಬ್ಬರು ನಾಯಕರೂ ಪ್ರಯತ್ನ ಚುರುಕುಗೊಳಿದ್ದಾರೆ.
Related Articles
Advertisement
ಇಲ್ಲೂ ಇದೆ ಜಾತಿ ಸಮೀಕರಣ ದಲಿತರೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಲು ಬಿಜೆಪಿ ಹೊರಟಿದೆ. ಪ್ರಧಾನಿ ಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಹಾಗಾಗಿ, ಉಪರಾಷ್ಟ್ರಪತಿಯ ಆಯ್ಕೆ ವೇಳೆ ಈ ಎರಡೂ ವರ್ಗಗಳನ್ನು ಹೊರತು ಪಡಿಸಿದವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು. ಮಹಿಳೆಯೊಬ್ಬರಿಗೆ ಈ ಹುದ್ದೆ ಕೊಡಬಹುದೇ ಎಂಬ ಅನುಮಾನ ಇದ್ದರೂ, ಈಗಾಗಲೇ ಲೋಕಸಭೆ ಸ್ಪೀಕರ್ ಸ್ಥಾನವನ್ನು ಸುಮಿತ್ರಾರಿಗೆ ನೀಡಿರುವ ಕಾರಣ, ರಾಜ್ಯಸಭೆ ಸಭಾಧ್ಯಕ್ಷರ ಸ್ಥಾನವೂ ಮಹಿಳೆಗೆ ಸಿಗುವ ಸಾಧ್ಯತೆ ಕಡಿಮೆ. ಉಪರಾಷ್ಟ್ರಪತಿ ಹುದ್ದೆಯನ್ನು ರಾಜಕೀಯೇತರ ವ್ಯಕ್ತಿಗೆ ನೀಡಲು ಬಿಜೆಪಿ-ಆರೆಸ್ಸೆಸ್‌ಗೆ ಇಷ್ಟವಿಲ್ಲ ಎನ್ನಲಾಗಿದೆ. ಸಾಬರಮತಿ ಆಶ್ರಮದಿಂದ ಮೀರಾ ಪ್ರಚಾರ ಆರಂಭ
ಅಹಮದಾಬಾದ್: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರು ಶುಕ್ರ ವಾರ ಗುಜರಾತ್‌ನ ಸಾಬರಮತಿ ಆಶ್ರಮದಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಮಾರನೇ ದಿನವೇ ಇಲ್ಲಿಗೆ ಆಗಮಿಸಿದ ಮೀರಾಕುಮಾರ್ 40 ನಿಮಿಷಗಳ ಕಾಲ ಇಲ್ಲಿ ಕಳೆದರು. ಇವರೊಂ ದಿಗೆ ಗುಜರಾತ್ ಕಾಂಗ್ರೆಸ್ ನಾಯಕರಾದ ಭರತ್‌ಸಿನ್ಹ ಸೋಲಂಕಿ ಮತ್ತು ಶಂಕರಸಿಂಗ್ ವಘೇಲಾ ಅವರಿದ್ದರು. ಪ್ರಚಾರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೀರಾ, “ನಾನು ಮಹಾತ್ಮ ಗಾಂಧಿಯ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆ. ಈ ಸ್ಥಳದಲ್ಲಿ ಒಂದು ವಿಶಿಷ್ಟ ಶಕ್ತಿಯಿದೆ. ಅದನ್ನು ಪಡೆದುಕೊಳ್ಳಲೆಂದು ಇಲ್ಲಿಗೆ ಬಂದೆ. ಈ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲು ನನಗೆ ಸಾಕಷ್ಟು ಶಕ್ತಿ ಈಗ ಸಿಕ್ಕಿದೆ,’ ಎಂದಿದ್ದಾರೆ. ಇದೇ ವೇಳೆ, ಅವರು ಸ್ವಲ್ಪ ಹೊತ್ತು ಚರಕದ ಮುಂದೆ ಕುಳಿತು ನೂಲು ತೆಗೆದರು. ರಾಷ್ಟ್ರಪತಿ ಹುದ್ದೆ: “ದೇವರ’ ಅರ್ಜಿಯೂ ತಿರಸ್ಕೃತ!
ರಾಷ್ಟ್ರಪತಿ ಹುದ್ದೆಗಾಗಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ 93 ಅಭ್ಯರ್ಥಿಗಳ ಪೈಕಿ “ದೇವರು’ ಕೂಡ ಒಬ್ಬರು! ಅಷ್ಟೇ ಅಲ್ಲ, ಅಬ್ರಹಾಂ ಲಿಂಕನ್, ಐನ್‌ಸ್ಟಿàನ್‌ರಂಥ ಮಹಾನ್ ವ್ಯಕ್ತಿಗಳು ಅನುಮೋದನೆ ಮಾಡಿ ದ್ದರೂ, ಹಲವರ ಅರ್ಜಿಗಳು ತಿರಸ್ಕೃತ ಗೊಂಡಿವೆ. ಅಚ್ಚರಿಯಾದರೂ ಇದು ಸತ್ಯ. ತಿರಸ್ಕೃತಗೊಂಡ ಅರ್ಜಿಗಳಲ್ಲಿದ್ದ ನಗೆಪಾಟಲಿಗೀಡಾಗುವ ವಿಚಾರಗಳು ಇದೀಗ ಬಹಿರಂಗಗೊಂಡಿವೆ. ಪಾಣಿಪತ್‌ನ ದೇವಿದಯಾಳ್ ಅಗರ್ವಾಲ್ ಎಂಬವರು “ಗಾಡ್’ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರಂತೆ. “ನಾನು ಸರ್ವೋತ್ಛ ಶಕ್ತಿ. ನನಗೆ 50 ಶಾಸಕರು, ಸಂಸದರ ಅನುಮೋದನೆ ಬೇಕಿಲ್ಲ,’ ಎಂದು ಅವರು ಹೇಳಿದ್ದರಂತೆ. ಜತೆಗೆ, “ಮೀರಾಕುಮಾರ್ ಅಥವಾ ಕೋವಿಂದ್‌ರಲ್ಲಿ ಮಂತ್ರದಂಡವಿದೆಯೇ? ನನ್ನ ಅರ್ಜಿಯನ್ನೇನಾದರೂ ತಿರಸ್ಕರಿಸಿದರೆ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಲಿದೆ’ ಎಂದೂ ನಾಮಪತ್ರದಲ್ಲಿ ಅವರು ಬರೆದಿದ್ದರು ಎನ್ನಲಾಗಿದೆ. ಇನ್ನು ಹರ್ಯಾಣದ ವಿನೋದ್ ಕುಮಾರ್ ಎಂಬವರು, ತಮಗೆ ಅನುಮೋದಕರಾಗಿ ಭಗತ್‌ಸಿಂಗ್, ವಿವೇಕಾನಂದ, ನೆಲ್ಸನ್ ಮಂಡೇಲಾ, ಬಿ.ಆರ್.ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜೆ.ಎಫ್.ಕೆನಡಿ, ಲೆನಿನ್, ಲಿಂಕನ್, ಐನ್‌ಸ್ಟಿನ್‌ರ ಹೆಸರನ್ನು ಬರೆದಿದ್ದರು.