Advertisement

ಮೋದಿ ವಿರುದ್ಧ ಸುಳ್ಳು ಆರೋಪ

07:12 AM Mar 18, 2019 | Team Udayavani |

ಹೊನ್ನಾಳಿ: ಸ್ವಾತಂತ್ರ್ಯ ಬಂದ ನಂತರ ತಕ್ಷಣ ಕಾಂಗ್ರೆಸ್‌ನ್ನು ವಿಸರ್ಜಿಸುವಂತೆ ಗಾಂಧೀಜಿ ಸಲಹೆ ನೀಡಿದ್ದರೂ ಅಂದಿನ ಕೆಲ ಕಾಂಗ್ರೆಸ್‌ ಮುಖಂಡರು ಸ್ವಾರ್ಥಕ್ಕಾಗಿ ಕಾಂಗ್ರೆಸ್‌ನ್ನು ಪಕ್ಷವನ್ನಾಗಿ ಪರಿವರ್ತಿಸಿ, ವಿಸರ್ಜಿಸಲಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾ. ನಾಗರಾಜ್‌ ಆರೋಪಿಸಿದರು. ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ತಾಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸ್ವಾತಂತ್ರ್ಯ ಬಂದಾಗಿನಿಂದ ತುಷ್ಟೀಕರಣದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು ಭಾರತ ಅಭಿವೃದ್ಧಿಯತ್ತ ದಾಪುಗಾಲು ಹಾಕುವಂತೆ ನೋಡಿಕೊಂಡಿದ್ದಲ್ಲದೆ ನೆಲದ ಸಂಸ್ಕೃತಿ, ಆಚರಣೆ ಹಾಗೂ ಜೀವನ ಪದ್ಧತಿಗಳನ್ನು ವಿಕೃತ ಮನೋಭಾವದಿಂದ ಅವಹೇಳನ ಮಾಡುತ್ತಿದ್ದ ಹಲವಾರು ಎನ್‌ಜಿಒಗಳನ್ನು ನಿಷೇಧಿಸಿದರು. ಇದರಿಂದ ಮತಾಂತರ ಸ್ವಲ್ಪ ಮಟ್ಟಿಗೆ ತಡೆಯಲ್ಪಟ್ಟಿತು ಎಂದರು.

ಮೋದಿಯ ದಿಟ್ಟತನದ ಕಾರ್ಯಕ್ರಮಗಳಿಂದಾಗಿ ಅವರನ್ನು ಎದುರಿಸಲಾಗದ ಕಾಂಗ್ರೆಸ್‌ ಹಾಗೂ ಕೆಲ ಬುದ್ಧಿಜೀವಿಗಳು ಮೋದಿಯ ಆಡಳಿತದ ಬಗೆಗೆ ಸುಳ್ಳು ಆರೋಪ ಮಾಡುತ್ತ ಜನತೆಯನ್ನು ನಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಜನತೆ ಮೋದಿಯನ್ನು ನಂಬಿದ್ದಾರೆ ಎಂದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಪ್ರಮುಖರಾದ ಕುಬೇರಪ್ಪ, ನಾಗರಾಜ್‌, ನರಸಗೊಂಡನಹಳ್ಳಿ ರಘು, ಮೋಹನ್‌, ಪ್ರೇಮಕುಮಾರ್‌ ಭಂಡಿಗಡಿ, ಲಲಿತಾ ಭಾರ್ಗವ್‌, ಸಾಹಿತಿ ಕತ್ತಿಗೆ ಚನ್ನಪ್ಪ ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನ ಗರೀಬಿ ಹಟಾವೋ ಕೇವಲ ಘೋಷಣೆ 
ಚನ್ನಗಿರಿ: ಕಾಂಗ್ರೆಸ್‌ ಸರ್ಕಾರದ ಗರಿವೋ ಹಟಾವೋ ಕೇವಲ ಘೋಷಣೆಯಾಗಿಯೇ ಉಳಿದಿದೆ. ಇದಕ್ಕೆ ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ತಂದಿರುವ ಯೋಜನೆಗಳೇ ಸಾಕ್ಷಿಯಾಗಿವೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

Advertisement

ಜವಳಿ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಬಿಜೆಪಿ ಆಯೋಜಿಸಿದ್ದ ಪ್ರಬುದ್ಧರು ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ 65ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗಿದ್ದರೆ, ಪ್ರಸ್ತುತ ನರೇಂದ್ರ ಮೋದಿ ಬಡವರು, ಕೂಲಿಕಾರ್ಮಿಕರು, ಕೃಷಿಕರು, ರೈತರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿರುವ ಸಾಕಷ್ಟು ಬಡವರ್ಗದ ಜನರಿಗೆ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇರುತ್ತಿರಲಿಲ್ಲ ಎಂದ ಸಿದ್ದೇಶ್ವರ್‌, ಕಾಂಗ್ರೆಸ್‌ನಿಂದ ಕೇವಲ ಆಶ್ವಾಸನೆಗಳ ಅಭಿವೃದ್ಧಿ ಮಾತ್ರ ನಡೆದಿದೆ ಎಂದು ವ್ಯಂಗ್ಯವಾಡಿದರು.

ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಕಾರ್ಯಕರ್ತರು ಹಾಗೂ ಮತದಾರರ ನಾಡಿಮಿಡಿತವನ್ನು ಅರಿತಿದ್ದೇನೆ, ಸಮಸ್ಯೆಗಳನ್ನು ಆಲಿಸಿದ್ದೇನೆ. ಹಿಇಗಾಗಿ ಸತತ 3ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ನಿರೀಕ್ಷೆ ನನ್ನಲ್ಲಿದೆ ಎಂದರು. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಭ್ರಷ್ಟಚಾರವಿಲ್ಲದೇ ಸುಭದ್ರ ಆಡಳಿತವನ್ನು ನೀಡಿರುವ ಪಕ್ಷ ಬಿಜೆಪಿ ಆಗಿದೆ. ಜನತೆ ನರೇಂದ್ರ ಮೋದಿಗೆ ನೀಡಿದ ಅವಕಾಶದಲ್ಲಿ ಸಮರ್ಥ ಆಡಳಿತಗಾರರೆಂದು ತೋರಿಸಿದ್ದಾರೆ ಎಂದರು. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಮಾಜಿ ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌, ಜಿಪಂ
ಸದಸ್ಯರಾದ ಮಂಜುಳಾ, ಯಶೋಧಮ್ಮ, ಲೋಕೇಶ್ವರ, ವಾಗೀಶ್‌, ಬಿಜೆಪಿ ತಾಲೂಕು ಮುಖಂಡ ದೇವರಹಳ್ಳಿ ಬಸವರಾಜ್‌, ವೀರಭದ್ರಪ್ಪ, ಹೇಮಂತ್‌, ತಾಪಂ ಸದಸ್ಯ ಕೆ.ಸಿ. ರವಿಕುಮಾರ್‌, ಪುರಸಭೆ ಸದಸ್ಯ ಪರಮೇಶ್ವರಪ್ಪ, ದಿಗ್ಗೆ

2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಕ್ಷೇತ್ರದಲ್ಲಿ ಸೌಜನ್ಯಕ್ಕಾದರೂ ಕಾರ್ಯಕರ್ತರ ಯೋಗಕ್ಷೇಮವನ್ನು ವಿಚಾರಿಸಿದ್ದಾರಾ? ನೀವು ರಾಜಕೀಯ ಮಾಡುತ್ತಿರುವುದು ನಿಮ್ಮ ಸಂಸ್ಥೆಗಳು, ಹಣವನ್ನು ಉಳಿಸಿಕೊಳ್ಳಲು. ಅಧಿಕಾರಕ್ಕೆ ಮಾತ್ರ ಆಸೆ ಪಡುತ್ತಿದ್ದೀರಾ. ಜನತೆ ಕೆಲಸ ಮಾಡಲು ಅಲ್ಲ. ಜಿಲ್ಲೆಯ ಜನತೆ ಚುನಾವಣೆಯಲ್ಲಿ ಮುಖ ತೋರಿಸುವವರಿಗೆ ಮಣೆ ಹಾಕದೇ, ನಿಷ್ಠಾವಂತರನ್ನು ಬೆಂಬಲಿಸಬೇಕು.  ಯಶವಂತರಾವ್‌ ಜಾಧವ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ

 ಕಾಂಗ್ರೆಸ್‌ನಲ್ಲಿ ಎಸ್‌. ಎಸ್‌ ಮಲ್ಲಿಕಾರ್ಜುನ್‌ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುತ್ತಾರೆ. ಇತ್ತ ಅಪ್ಪ ಶಾಮನೂರು ಶಿವಶಂಕರಪ್ಪ ನಾನು ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಬಿಜೆಪಿಯಲ್ಲಿ ಯಾರ ಪೈಪೋಟಿಯಿಲ್ಲ. ಜಿಎಂ. ಸಿದ್ದೇಶ್ವರ್‌ ಕ್ಷೇತ್ರದ ಮದುಮಗನಾಗಿ ಸಿದ್ಧರಿದ್ದಾರೆ.
 ಆಯನೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next