Advertisement

Modi; “ಅಬ್‌ ಕೀ ಬಾರ್‌ 10 ಲಾಖ್‌ ಪಾರ್‌’: ವಾರಾಣಸಿಯಲ್ಲಿ ಬಿಜೆಪಿ

12:45 AM Mar 19, 2024 | Team Udayavani |

ಲಕ್ನೋ: ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ಮೋದಿ 10 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಬೇಕು ಎಂಬ ಬಗ್ಗೆ ಸಿದ್ಧತೆಗಳು ನಡೆದಿವೆ. ಅಲ್ಲಿ ಈಗ “ಅಬ್‌ ಕೀ ಬಾರ್‌ 10 ಲಾಖ್‌ ಪಾರ್‌’ (ಈ ಬಾರಿ 10 ಲಕ್ಷ ಮತಗಳು) ಎಂಬುದು ವಾರಾಣ ಸಿಯಲ್ಲಿ ಬಿಜೆಪಿಯ ಘೋಷ ವಾಕ್ಯವಾಗಿದೆ.

Advertisement

“ಪ್ರಧಾನಿ ಮೋದಿ ಅವರು ದಾಖಲೆಯ ಮತಗಳನ್ನು ಪಡೆಯಬೇಕು ಎಂಬುದು ನಮ್ಮ ಗುರಿಯಾಗಿದೆ’ ಎಂದು ವಾರಾಣಸಿ ನಗರದ ಬಿಜೆಪಿ ಮುಖ್ಯಸ್ಥ ವಿದ್ಯಾಸಾಗರ್‌ ರೈ ಎಂದಿದ್ದಾರೆ. 2014ರಲ್ಲಿ ಮೋದಿ 5.81 ಲಕ್ಷ ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಕೇಜ್ರಿವಾಲ್‌ 2.09 ಲಕ್ಷ ಮತಗಳನ್ನು ಪಡೆದಿದ್ದರು. ಒಟ್ಟಾರೆ ಪ್ರಧಾನಿ 3,71,784 ಮತಗಳ ಅಂತರದಿಂದ ಗೆದ್ದಿದ್ದರು. 2019ರಲ್ಲಿ ಮೋದಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next