ಗ್ರಾಮೀಣ ಮತ್ತು ನಗರ ಪ್ರದೇಶಗಳ ಅರ್ಹ ಫಲಾನುಭವಿಗಳಿಗೆ ಪಿಎಂಎವೈ ಯೋಜನೆ ಯಡಿ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಲಾಗುತ್ತದೆ.
Advertisement
“ಅರ್ಹ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳ ದಿಂದ ಉಂಟಾಗುವ ವಸತಿ ಆವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 3 ಕೋಟಿ ಮನೆಗಳ ನಿರ್ಮಾಣಕ್ಕೆ, ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳಿಗೆ ನೆರವು ನೀಡಲು ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧ ರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಂಎವೈಯಡಿ ನಿರ್ಮಿಸಲಾದ ಎಲ್ಲ ಮನೆಗಳಿಗೆ ಶೌಚಾಲಯ, ಎಲ್‌ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಪೂರೈಕೆ ಸೇರಿ ಎಲ್ಲ ಮೂಲ ಸೌಕರ್ಯ ಒದಗಿಸಲಾಗುತ್ತದೆ.
Related Articles
ತೃತೀಯ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಭಿವೃದ್ಧಿ ಕಾರ್ಯಗಳತ್ತ ಮೋದಿ ಸರಕಾರ ಗಮನ ನೆಟ್ಟಿದೆ. “ಮೊದಲ 100 ದಿನಗಳ ಅಜೆಂಡಾ’ವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ 100 ದಿನಗಳ ಕ್ರಿಯಾ ಯೋಜನೆಯ ಅಂತಿಮ ಪ್ರಾತ್ಯಕ್ಷಿಕೆ ನೀಡುವಂತೆ ಪಿಎಂಒ ಕಚೇರಿಯಿಂದ ಕೋರಿಕೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕಿಸಾನ್ ನಿಧಿ ಕಡತಕ್ಕೆ ಮೊದಲ ಸಹಿಕೇಂದ್ರ ಸಚಿವ ಸಂಪುಟದ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ಬೆನ್ನಲ್ಲೇ ಪ್ರಧಾನಿ ಮೋದಿ ಯವರು ಸೋಮವಾರ ದಿಲ್ಲಿಯ ಸೌತ್ ಬ್ಲಾಕ್ ಕಚೇರಿಯಲ್ಲಿ ಪ್ರಧಾನಿಯಾಗಿ ತಮ್ಮ 3ನೇ ಇನ್ನಿಂಗ್ಸ್ ಆರಂಭಿಸಿದರು. ಮೊದಲ ದಿನವೇ ಅವರು 17ನೇ ಕಂತಿನ “ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು. ಏನಿದು ಪಿಎಂಎವೈ?
-ಇದು ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆ
-ಗ್ರಾಮೀಣ, ನಗರ ಪ್ರದೇಶದ ಅರ್ಹ ಕುಟುಂಬಗಳಿಗೆ ಧನಸಹಾಯ
-2015ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಆರಂಭ
-ಕೇಂದ್ರದ ಯಶಸ್ವಿ ಯೋಜನೆಗಳಲ್ಲಿ ಪಿಎಂಎವೈ ಕೂಡ ಒಂದು
-ವಾರ್ಷಿಕ 3-18 ಲಕ್ಷ ರೂ. ಆದಾಯ ಇರುವವರು ಅರ್ಹರು ಪ್ರಧಾನಮಂತ್ರಿ ಕಚೇರಿ (ಪಿಎಂಒ) ಬರೀ ಪ್ರಧಾನಿಗೆ ಸೀಮಿತವಾದುದಲ್ಲ, ಜನರಿಗೆ ಮುಕ್ತವಾಗಿರಬೇಕು. 10 ವರ್ಷಗಳ ಹಿಂದೆ ಬರೀ ಆಡಳಿತದ ಶಕ್ತಿ ಕೇಂದ್ರವಾಗಿದ್ದ ಪಿಎಂಒ ಈಗ ವ್ಯವಸ್ಥೆಯ ಬದಲಾವಣೆಗೆ ಶಕ್ತಿ, ಚೈತನ್ಯ ತುಂಬುವ ಬದಲಾವಣೆಯ ಹರಿಕಾರನಾಗಿ ಬದಲಾಗಿದೆ.
-ನರೇಂದ್ರ ಮೋದಿ, ಪ್ರಧಾನಿ