Advertisement

ಹಿಸ್ಟರಿ ಟಿವಿ18 ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ನಿರ್ಮಾಣದ ಕುರಿತು ಸಾಕ್ಷ್ಯಚಿತ್ರ

03:58 PM Sep 16, 2021 | Team Udayavani |

ಹೊಸದಿಲ್ಲಿ: ಗುಜರಾತ್‌ ನ ಅಹ್ಮದಾಬಾದ್‌ನಲ್ಲಿ ನಿರ್ಮಿಸಲಾಗಿರುವ ನರೇಂದ್ರ ಮೋದಿ ಕ್ರೀಡಾಂಗಣವು 1,32,000  ಆಸನ ಸಾಮರ್ಥ್ಯವನ್ನು ಹೊಂದಿದ್ದು, ಈ ಮೂಲಕ ಇದು ಆಸ್ಟ್ರೇಲಿಯಾದ ಎಂಸಿಜಿಯನ್ನು ಮೀರಿಸುವ ಮೂಲಕ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದನ್ನು ಇತ್ತೀಚೆಗೆ ಹಳೆಯ ಮೊಟೆರಾ ಕ್ರೀಡಾಂಗಣದ ಅದೇ ಮೈದಾನದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ.

Advertisement

ಈಗ, History TV 18 ಈ ಬೃಹತ್ ಎಂಜಿನಿಯರಿಂಗ್ ಸಾಧನೆಯ ಬಗ್ಗೆ ವಿವರವಾದ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇದು ಆಧುನಿಕ ದಿನದ ಆಟಕ್ಕಾಗಿ ನಿರ್ಮಿಸಲಾದ ಭವಿಷ್ಯಮುಖಿ ಕ್ರೀಡಾಂಗಣದ ಕಥೆಯನ್ನು ಹೇಳುತ್ತದೆ. ಹೈ-ಡೆಫಿನಿಶನ್ ನಲ್ಲಿ ಚಿತ್ರೀಕರಿಸಲಾದ ಈ ಸಾಕ್ಷ್ಯಚಿತ್ರವು ವೀಕ್ಷಕರನ್ನು ಆಕರ್ಷಿಸುವ ಬೆರಗುಗೊಳಿಸುವ ಸಂಗತಿಗಳನ್ನು ಪ್ರಸ್ತುತಪಡಿಸುವ ಜೊತೆಗೆ ಈ ವಾಸ್ತುಶಿಲ್ಪದ ಅದ್ಭುತವನ್ನು ರಚಿಸಲು ಬೇಕಾಗುವ ಸರಂಜಾಮುಗಳ ಬಗೆಗಿನ ಹಿಂದೆಂದೂ ಕಂಡಿರದ ಅಂಶಗಳನ್ನು ಬಹಿರಂಗಪಡಿಸುತ್ತದೆ. ಇದು ಸೆ.17ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಇದರಲ್ಲಿ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ರವಿಶಾಸ್ತ್ರಿಯಂಥ ಕ್ರಿಕೆಟ್ ದಿಗ್ಗಜರು ಮತ್ತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಕ್ರಿಕೆಟ್ ಪ್ರತಿಭೆಗಳೂ ಕಾಣಿಸಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್ ಮತ್ತು ಈ ಯೋಜನೆಯನ್ನು ಪ್ರಾರಂಭದಿಂದ ಅಂತ್ಯದವರೆಗೆ ಮೇಲ್ವಿಚಾರಣೆ ಮಾಡಿದ ವ್ಯಕ್ತಿಯಾದ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಮಾತುಗಳನ್ನು ಕೂಡ ವೀಕ್ಷಕರು ಕೇಳಲಿದ್ದಾರೆ.

ಇದನ್ನೂ ಓದಿ:ಸೆ.16: ಉದಯವಾಣಿ ಕಚೇರಿಗೆ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಭೇಟಿ

Advertisement

‘Modern Marvel: World’s Largest Cricket Stadium’, ಕ್ರಿಕೆಟ್ ವಿಶ್ವದ ಕೇವಲ ಹೊಸ ಹೆಗ್ಗುರುತನ್ನು ಕುರಿತು ಆಶ್ಚರ್ಯಕರ ಸಂಗತಿಗಳು ಮತ್ತು ಅಂಕಿಅಂಶಗಳೊಂದಿಗೆ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವುದಷ್ಟೇ ಅಲ್ಲದೆ, ಇದು ಭಾರತದ ಕ್ರಿಕೆಟ್ ಸೂಪರ್ ಸ್ಟಾರ್‌ಗಳು ಹಳೆಯ ಮೊಟೆರಾ ಪಿಚ್ ಸಾಕ್ಷಿಯಾದ ಭಾರತೀಯ ಕ್ರಿಕೆಟ್‌ನ ಐತಿಹಾಸಿಕ ಕ್ಷಣಗಳನ್ನು ನೆನಪಿಸಿಕೊಳ್ಳುವುದನ್ನು ಕೂಡ ಒಳಗೊಂಡಿದೆ. ರವಿಶಾಸ್ತ್ರಿ 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ ಬಗ್ಗೆ ಮಾತನಾಡಿದರೆ, ‘ಹರಿಯಾಣ ಹರಿಕೇನ್’ ಕಪಿಲ್ ದೇವ್ ಅವರು ಹಳೆಯ ಮೊಟೆರಾ ಕ್ರೀಡಾಂಗಣದಲ್ಲಿ ಸುನಿಲ್ ಗವಾಸ್ಕರ್ 10,000 ರನ್ ಪೂರ್ಣಗೊಳಿಸಿದ್ದರ ಬಗ್ಗೆ ಮಾತನಾಡುತ್ತಾರೆ. “ಇದು ನಾವು ಸಂಭ್ರಮಾಚರಿಸಲು ಒಂದು ದೊಡ್ಡ ವಿಷಯವಾಗಿತ್ತು. ನಮ್ಮ ಪೀಳಿಗೆಯ ಒಬ್ಬ ಕ್ರಿಕೆಟಿಗ 10,000 ರನ್ ಗಳಿಸಿದ್ದರು, ಆದ್ದರಿಂದ ಅದು ತುಂಬಾ ದೊಡ್ಡ ವಿಚಾರವಾಗಿತ್ತು!” ಎಂದು ಅವರು ಹೇಳುತ್ತಾರೆ. ಗೌತಮ್ ಗಂಭೀರ್ ಅವರು 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಠಿಣ ವಿಶ್ವಕಪ್ ಕ್ವಾರ್ಟರ್ ಫೈನಲ್ ಆಡಿದ್ದನ್ನು ನೆನಪಿಸಿಕೊಂಡರೆ, ಮೋಟೆರಾದಲ್ಲಿ ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದಿದ್ದನ್ನು ಪಾರ್ಥಿವ್ ಪಟೇಲ್ ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ಗರಿಯಿಟ್ಟಂತೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವೀಕ್ಷಕರಿಗೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ದ್ವಿಶತಕವನ್ನು ಗಳಿಸಿದ್ದು ಸಹ ಇಲ್ಲಿಯೇ ಎಂದು ನೆನಪಿಸುತ್ತಾರೆ.

ಅಹಮದಾಬಾದ್‌ ನ ಈ ಹೊಸ ಮಿನುಗುವ ಕಟ್ಟಡ, ವಿನ್ಯಾಸ ಮತ್ತು ಎಂಜಿನಿಯರಿಂಗ್‌ನ ಆಧುನಿಕ ಅದ್ಭುತ ಮತ್ತು ಶತಕೋಟಿ ಜನರಿಗೆ ಅವರ ಅತ್ಯಂತ ಪ್ರೀತಿಯ ನೆನಪುಗಳನ್ನು ನೀಡಿದ ಕ್ರೀಡೆಗೆ ಸೂಕ್ತವಾದ ಸಮರ್ಪಣೆ ಬಂದಿದೆ. HistoryTV18 ರ ‘ ‘Modern Marvel: World’s Largest Cricket Stadium’,’ ಭಾರತದ ನೆಚ್ಚಿನ ಕ್ರೀಡೆಯ ಈ ಹೊಸ ಹೆಗ್ಗುರುತಿನ ಪಥವನ್ನು ತೋರಿಸುತ್ತದೆ. ಇದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಗಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣವನ್ನು ಲಾರ್ಸೆನ್ & ಟೌಬ್ರೊ (ಎಲ್&ಟಿ) ನಿರ್ಮಿಸಿದ್ದು, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯೂ ಸೇರಿದಂತೆ ದೇಶದ ಕೆಲವು ಅಪ್ರತಿಮ ಹೆಗ್ಗುರುತುಗಳನ್ನು ನಿರ್ಮಿಸಿದ ಕೀರ್ತಿಗೂ ಪಾತ್ರವಾಗಿದೆ. ಯೋಜನೆಯ ಅಗಾಧ ಗಾತ್ರದ ಪ್ರಮಾಣ ಮತ್ತು ಸಂಕೀರ್ಣತೆಯಿಂದಾಗಿ ಆಸ್ಟ್ರೇಲಿಯಾದಿಂದ ವಿನ್ಯಾಸ ವಾಸ್ತುಶಿಲ್ಪಿಗಳು, ಅಮೇರಿಕದಿಂದ ಛಾವಣಿ ತಜ್ಞರು, ಜಪಾನ್‌ನಿಂದ ವಿಶೇಷ ಕ್ಯಾನೋಪಿ ಫ್ಯಾಬ್ರಿಕ್, ಇಟಲಿಯಿಂದ ಕೇಬಲ್‌ಗಳು ಮತ್ತು ಸ್ಪೇನ್‌ನಿಂದ ಸ್ಟೇಡಿಯಂ ಲೈಟಿಂಗ್ ಅನ್ನು ತರಲಾಗಿತ್ತು! ಈ ಬೃಹತ್ ಎಂಜಿನಿಯರಿಂಗ್ ಯೋಜನೆಯ ಹಿಂದಿರುವ ಜನರೊಂದಿಗೆ ವಿವರಗಳಿಗೆ ಹೆಚ್ಚಿನ ಗಮನ ನೀಡುತ್ತ ಬೆಳಕು ಚೆಲ್ಲುವ ಸಂದರ್ಶನಗಳೊಂದಿಗೆ, HistoryTV18 ರ ವಿವರಣಾತ್ಮಕ ಸಾಕ್ಷ್ಯಚಿತ್ರವು ಈ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next