Advertisement

ಗುರುಪುರ ಸಂಘದಿಂದ ಮಾದರಿ ಕೆಲಸ: ಮಾಲಾಡಿ

09:54 AM Nov 10, 2017 | Team Udayavani |

ಮಹಾನಗರ: ಗುರುಪುರ ಬಂಟರ ಮಾತೃ ಸಂಘದ ಯುವಕರು ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು
ನೆರವೇರಿಸಿ, ಬಂಟ ಯುವ ಜನಾಂಗವನ್ನು ಒಂದೇ ಸೂರಿನಡಿ ಸೇರಿಸಿ, ಯಶಸ್ವಿಯಾಗಿ ಕ್ರೀಡಾಕೂಟವನ್ನು ನೆರ ವೇರಿಸಿರುವುದು ಜಿಲ್ಲೆಯ ಇತರ ಎಲ್ಲ ಬಂಟ ಸಂಘಗಳಿಗೆ ಮಾದರಿಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಹೇಳಿದರು. 

Advertisement

ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ಆಶ್ರಯದಲ್ಲಿ ಗಂಜಿ ಮಠ ರಾಜ್‌ ಅಕಾಡೆಮಿ ಸ್ಕೂಲ್‌ ಕ್ರೀಡಾಂಗಣದಲ್ಲಿ ಜರಗಿದ ಬಂಟ ಕ್ರೀಡಾಕೂಟದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಕ್ರೀಡೆಯಿಂದ ಪ್ರತಿಭೆ ಅನಾವರಣ
ರಾಜ್‌ ಅಕಾಡೆಮಿ ಸಂಚಾಲಕಿ ಮಮತಾ ಯತಿರಾಜ್‌ ಶೆಟ್ಟಿ ನಿಟ್ಟೆಗುತ್ತು ಉದ್ಘಾಟಿಸಿ, ಕ್ರೀಡಾಕೂಟ ಯುವ ಪ್ರತಿಭೆಗಳನ್ನು ಗುರುತಿಸಲು ತುಂಬಾ ಸಹಕಾರಿಯಾಗುತ್ತದೆ. ಪ್ರಗತಿಪರ ಕೃಷಿಕ, ಬಿಜೆಪಿ ಮುಖಂಡ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಧ್ವಜಾರೋಹಣವನ್ನು ನೆರವೇರಿಸಿ, ಕ್ರೀಡಾಕೂಟಗಳು ಯುವ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ರಾಜ್‌ಕುಮಾರ್‌ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಯುವ ಉದ್ಯಮಿ ದಶರಥ್‌ ಶೆಟ್ಟಿ ನಿಟ್ಟೆಗುತ್ತು, ಮಂಗಳೂರು ಉತ್ತರ ಕ್ಷೇತ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಆಳ್ವ, ಯುವ ಕಾಂಗ್ರೆಸ್‌ ಮುಖಂಡರಾದ ಪ್ರಸಾದ್‌ ಮಲ್ಲಿ ಮೂಡುಶೆಡ್ಡೆ, ಪೃಥ್ವೀರಾಜ್‌ ಆಳ್ವ, ತಾಲೂಕು ಪಂಚಾಯತ್‌ ಸದಸ್ಯ ಸಚಿನ್‌ ಅಡಪ, ಯುವ ಉದ್ಯಮಿ ಸುಧೀರ್‌ ಭಂಡಾರಿ ಗುರುಪುರ ಮುಖ್ಯ ಅತಿಥಿಗಳಾಗಿದ್ದರು. ದೈಹಿಕ ಶಿಕ್ಷಕರಾದ ದಯಾನಂದ್‌ ಮಾಡ ಎಕ್ಕಾರು, ಪ್ರೇಮನಾಥ್‌ ಶೆಟ್ಟಿ ಪುತ್ತೂರು, ಶಶಿಧರ ಶೆಟ್ಟಿ ಗಂಜಿಮಠ, ಜಯಲಕ್ಷ್ಮೀ ಶೆಟ್ಟಿ ನಾರಳ, ಸುಧಾಕರ್‌ ಶೆಟ್ಟಿ ಮಂಗಳೂರು ತೀರ್ಪುಗಾರರಾಗಿದ್ದರು.

ಸಮಾರೋಪದಲ್ಲಿ ರವಿರಾಜ್‌ ಶೆಟ್ಟಿ ನಿಟ್ಟೆಗುತ್ತು, ಉದ್ಯಮಿ ರವೀಂದ್ರನಾಥ ಮಾರ್ಲ ಪೆರ್ಮಂಕಿ ಹೊಸಮನೆ, ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ತಾಲೂಕು ಬಂಟರ ಸಂಘದ ಸಂಚಾಲಕ ಜಯರಾಮ್‌ ಸಾಂತ, ಉಮೇಶ್‌ ರೈ ಪದವು ಮೇಗಿನಮನೆ, ಮಹಿಳಾ ಘಟಕದ ಅಧ್ಯಕ್ಷರಾದ ಸುನೀತಾ ಶೆಟ್ಟಿ ವಾಮಂಜೂರು, ಸುಬ್ಬಯ್ಯ ಶೆಟ್ಟಿ ಗುರುಪುರ ಉಪಸ್ಥಿತರಿದ್ದರು.

Advertisement

20ವಿಭಾಗಗಳಲ್ಲಿ ಸ್ಪರ್ಧೆ
ಸಂಘದ ವ್ಯಾಪ್ತಿಯ 13 ಗ್ರಾಮಗಳ ಸುಮಾರು 400ಕ್ಕೂ ಮಿಕ್ಕಿ ಬಂಟ ಕ್ರೀಡಾಪಟುಗಳು 20 ವಿಭಾಗಗಳಲ್ಲಿ ಸ್ಪರ್ಧಿಸಿರುತ್ತಾರೆ. ಜಯರಾಮ್‌ ರೈ ಉಳಾಯಿ ಬೆಟ್ಟುಗುತ್ತು ಮತ್ತು ಕವಿತಾ ಶೆಟ್ಟಿ ಪೆರ್ಮಂಕಿಗುತ್ತು ವಿಜೇತರ ಹೆಸರನ್ನು ವಾಚಿಸಿದರು. ಯುವ ವಿಭಾಗದ ಅಧ್ಯಕ್ಷ ಉದಯ ಶೆಟ್ಟಿ ಬೆಳ್ಳೂರುಗುತ್ತು ಸ್ವಾಗತಿಸಿ, ಸುದರ್ಶನ್‌ ಶೆಟ್ಟಿ ಪೆರ್ಮಂಕಿ ವಂದಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next