Advertisement

ಪ್ರಧಾನಿ ಮೋದಿ ಸಾಧನೆ ಮಾದರಿ

01:38 PM Jun 02, 2020 | mahesh |

ಶಿವಮೊಗ್ಗ: ಪ್ರಧಾನಿ ಮೋದಿ ಅವರು ವಜ್ರಕ್ಕಿಂತ ಕಠೊರ, ಹೂವಿನಷ್ಟೇ ಮಧುರ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಬಣ್ಣಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಮೋದಿಯನ್ನು ಪ್ರೀತಿಸುತ್ತಿದೆ. ಯುವಕರ ಆರಾಧಕರಾಗಿರುವ ಅವರು ಸಾಧನೆಯ ಹರಿಕಾರರಾಗಿದ್ದಾರೆ. ಜಗತ್ತಿನ ರಾಷ್ಟ್ರಗಳು ಭಾರತದತ್ತ ನೋಡುತ್ತಿದ್ದು, ಮೋದಿ ಅವರ ಕಾರಣಕ್ಕಾಗಿಯೇ ಗೆಳೆತನವನ್ನು ಬಯಸಲು ತುದಿಗಾಲಲ್ಲಿ ನಿಂತಿವೆ ಎಂದರು. ಮೋದಿ ಹೂವಿನಷ್ಟೇ ಹಗುರವಾಗಿದ್ದರೂ ಕೂಡ ಮಿತ್ರನಿಗೆ ಮಿತ್ರ- ಶತ್ರುವಿಗೆ ಶತ್ರು ಆಗಿದ್ದಾರೆ. ಭಾರತವನ್ನು ಕೆಣಕುವ ಶತ್ರು ರಾಷ್ಟ್ರಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಅವರು ದೇಶದ ರಕ್ಷಕರು. ಅವರು ಒಂದು ವರ್ಷದಲ್ಲಿ ಮಾಡಿರುವ ಸಾಧನೆ, ಅಭಿವೃದ್ಧಿ ಅಪಾರವಾದುದು. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತ ಕೋವಿಡ್‌ ಸಂದರ್ಭದಲ್ಲಿ 20 ಲಕ್ಷ ಕೋಟಿ ಬಿಡುಗಡೆ ಮಾಡಿದ ಕೊಡುಗೈ ದಾನಿ. ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆಯಲಿಲ್ಲ.

Advertisement

ಅವರ ವೈಯಕ್ತಿಕ ಬದುಕು ಕೂಡ ಮಾದರಿಯಾದುದು. ಪ್ರಧಾನಿ ತಾಯಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದರೆ ಅವರು ಎಷ್ಟು ಸರಳವೆಂಬುದು ಅರ್ಥವಾಗುತ್ತದೆ ಎಂದರು. ರಾಜ್ಯಕ್ಕೆ ಅವರು ಅನೇಕ ರೀತಿಯಲ್ಲಿ ನೆರವು ನೀಡಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ಸುಮಾರು 17,249 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನರೇಗಾ ಸೇರಿದಂತೆ ಇತರೆ ಯೋಜನೆಗಳಿಗಾಗಿ 10 ಸಾವಿರ ಕೋಟಿ. ಬಿಡುಗಡೆ ಮಾಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ, ರೈಲ್ವೆ ಯೋಜನೆಗೆ ಕೋಟ್ಯಂತರ ರೂ. ಹಣ ಬಿಡುಗಡೆ ಜನೆಗೆ ಕೇಂದ್ರದ ಜೊತೆಗೆ ರಾಜ್ಯ ಸರ್ಕಾರಗಳು ಕೈ ಜೋಡಿಸಿವೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು ಕೋವಿಡ್‌19 ನಂತಹ ಸಂದರ್ಭದಲ್ಲಿ ಕೂಡ ಸಮರ್ಥ ಆಡಳಿತ ನೀಡಿದೆ ಎಂದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಡಿಸಿಸಿ ಬ್ಯಾಂಕ್‌ ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸೋಮವಾರ ಶಿವಮೊಗ್ಗದಲ್ಲಿ
ಇರುವ ಮೂವರು ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ರೈತರಿಗೆ ಸಾಲ ಕೊಡುವುದು ಬಿಟ್ಟು ಜಿಲ್ಲೆಯ ಹೊರಗಡೆ ಇರುವ ಖಾಸಗಿ ಸರ್ಕಾರಿ ಕಾರ್ಖಾನೆಗಳಿಗೆ 85 ಕೋಟಿ ಸಾಲ ನೀಡಿದ್ದಾರೆ. ಆದರೆ, ಜಿಲ್ಲೆಯ ರೈತರಿಗೆ ಸಾಲ ಕೊಡುತ್ತಿಲ್ಲ. ಸುಮಾರು 62 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೂಡ ಕೋವಿಡ್ ಎದುರಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು 2222 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಇದುವರೆಗೂ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕೂಡ ಇದರ ಜೊತೆಗೆ ಸಾಗಿದೆ. ನರೇಗಾ ಯೋಜನೆ ತನಿಖೆ ಆಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್‌, ಅಶೋಕ್‌ ನಾಯಕ್‌, ಭಾನುಪ್ರಕಾಶ್‌, ಮೇಘರಾಜ್‌, ಗಿರೀಶ್‌ ಪಟೇಲ್‌, ಆರ್‌.ಕೆ. ಸಿದ್ದರಾಮಯ್ಯ, ಡಿ.ಎಸ್‌. ಅರುಣ್‌, ದತ್ತಾತ್ರಿ, ಶಿವರಾಜ್‌, ಮಧುಸೂಧನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next