Advertisement
ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸುಮಾರು ಆರು ಕಿ.ಮೀ ದೂರ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಸಾರಥಿ ಅರ್ಜುನ ಸೇರಿದಂತೆ ಇನ್ನುಳಿದ ಆನೆಗಳು ಜಂಬೂಸವಾರಿಯಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸುತ್ತವೆ.
Related Articles
Advertisement
ಸೆ.21ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಬೆಳಗ್ಗೆ 9ಗಂಟೆಗೆ ಏರ್ಪಡಿಸಲು ಸಭೆ ತೀರ್ಮಾನಿಸಿತು. ದಸರಾ ಉದ್ಘಾಟಕರ ಆಯ್ಕೆ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರಿಗೆ ವಹಿಸಲಾಗಿದ್ದು, ಇನ್ನಷ್ಟೆ ಉದ್ಘಾಟಕರ ಆಯ್ಕೆ ಆಗಬೇಕಿದೆ. ದಸರಾ ವಸ್ತುಪ್ರದರ್ಶನ ಕೂಡ ಪ್ರತಿ ವರ್ಷ ಉದ್ಘಾಟನೆ ವೇಳೆಗೆ ಮಳಿಗೆಗಳು ಖಾಲಿ ಇರುತ್ತವೆ ಎಂಬ ದೂರುಗಳಿರುವುದರಿಂದ ಈ ಬಾರಿ ರಾಜ್ಯಸರ್ಕಾರದ 30 ಇಲಾಖೆಗಳಿಂದಲೇ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.
ದಸರಾ ಮಹೋತ್ಸವ ಆಚರಣೆಗೆ 15 ಕೋಟಿ ರೂ., ಮೈಸೂರು ನಗರದ ಒಳ ರಸ್ತೆಗಳ ದುರಸ್ತಿಗೆ 21 ಕೋಟಿ ರೂ. ಹಾಗೂ ಕಳೆದ ವರ್ಷದ ದಸರಾ ಬಾಕಿ 5.45 ಕೋಟಿ ರೂ. ಮಂಜೂರಾತಿಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಜತೆಗೆ ಬೇರೆ ಬೇರೆ ನಗರಗಳಿಂದ ಮೈಸೂರನ್ನು ಸಂಪರ್ಕಿಸುವ 17 ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 117 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಲಾಂಛನ ಅನಾವರಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ ದಸರಾ ಮಹೋತ್ಸವದ ಲಾಂಛನ ಅನಾವರಣಗೊಳಿಸಿದರು. ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಗೀತಾ ಮಹದೇವಪ್ರಸಾದ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗಜಪಯಣಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡದ ಗಜಪಯಣವನ್ನು ಆ.14ರಂದು ಬೆಳಗ್ಗೆ 11 ಗಂಟೆಗೆ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಆ.17ರಂದು ಮಧ್ಯಾಹ್ನ 12.05 ಗಂಟೆಗೆ ಮೈಸೂರು ಅರಮನೆ ಆವರಣಕ್ಕೆ ಗಜಪಡೆಯನ್ನು ಸ್ವಾಗತಿಸಲು ತೀರ್ಮಾನಿಸಲಾಯಿತು.