Advertisement

ಕೆಂಪೇಗೌಡರ ಜನ ಪರ ಕಾಳಜಿ,ದೂರದೃಷ್ಟಿ ಸಮಾಜಕ್ಕೆ ಮಾದರಿ

08:57 PM Jun 30, 2021 | Team Udayavani |

ಕೋಲಾರ: ನಾಡಪ್ರಭು ಕೆಂಪೇಗೌಡರ ಜನಪರ ಕಾಳಜಿದೂರದೃಷ್ಟಿ, ಕೆರೆಗಳ ನಿರ್ಮಾಣಕಾರ್ಯ ಇಂದಿನ ಆಡಳಿತಮತ್ತು ಸಮಾಜಕ್ಕೆ ಮಾದರಿ ಆಗಿದೆ ಎಂದು ಜಿಲ್ಲಾಸಹಕಾರಿ ಯೂನಿಯನ್‌ ನಿರ್ದೇಶಕ ಹಾಗೂ ತಾಲೂಕಿನ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ನಾಗರಾಜ್‌ತಿಳಿಸಿದರು.

Advertisement

ತಾಲೂಕಿನ ಅಣ್ಣಿಹಳ್ಳಿ ಗ್ರಾಮದಲ್ಲಿಕೆಂಪೇಗೌಡ ಯುವಸೇನೆಯಿಂದಕೆಂಪೇಗೌಡರ 512ನೇಜಯಂತಿ ಕಾರ್ಯಕ್ರಮದಲ್ಲಿ ನಾಡಪ್ರಭು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕೆಂಪೇಗೌಡರ ನಗರನಿರ್ಮಾಣ ಕಾರ್ಯ ಬರುವ ಎಲ್ಲಾ ಸರ್ಕಾರಗಳನಗರಾಭಿವೃದ್ಧಿ ಯೋಜನೆಗಳು ಸಮಾಜಕ್ಕೆಆದರ್ಶವಾಗಿವೆ ಎಂದು ಹೇಳಿದರು.

ಭದ್ರವಾದ ಕೋಟೆ ಕಟ್ಟುವ ಮೂಲಕ ನಾಡಿನ ಗಡಿ,ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡಿದ್ದರು. ಜನರಸಮಸ್ಯೆಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ತಮ್ಮಆಡಳಿತದಲ್ಲಿ ಅಳವಡಿಸಿಕೊಂಡಿದ್ದರು. ಮಲ್ಲಯುದ್ಧ,ಕತ್ತಿವರಸೆ, ಬಿಲ್ಲುಗಾರಿಕೆಯಂತಹ ಅನೇಕ ಕಲೆಗಳನ್ನುಕರಗತ ಮಾಡಿಕೊಂಡಿ¨ರು‌ª ಎಂದು ತಿಳಿಸಿದರು.

ಜನರಿಗಾಗಿ ದೂರದೃಷ್ಟಿಯಿಂದ ಕೆರೆಗಳನ್ನುನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಜನರಲ್ಲಿಮೌಡ್ಯ, ಕಂದಾಚಾರಹೋಗಲಾಡಿಸುವಲ್ಲಿ ಶ್ರಮಿಸಿದರು.ಕೆಂಪೇಗೌಡರುಒಂದುಸಮುದಾಯಕ್ಕೆಸೀಮಿತವಾಗದೇಸಮಾಜದ ಎಲ್ಲಾ ಸಮಾಜದ ಬಡವರನ್ನುಗುರುತಿಸುವಂತೆ ಮಾಡಿದ್ದರು. ವಿಶ್ವದಲ್ಲೇ ಬೆಂಗಳೂರನ್ನುವಿಶೇಷವಾಗಿ ನೋಡುವ ರೀತಿಯಲ್ಲಿ ನಿರ್ಮಾಣಮಾಡಿದ್ದು ಸಾಧನೆ ಎಂದು ಹೇಳಿದರು.ಅಣ್ಣಿಹಳ್ಳಿ ಸೊಸೈಟಿ ನಿರ್ದೇಶಕ ಸಿಇಒ ಶ್ರೀನಿವಾಸ್‌,ತೊಟಿÉ ಶ್ರೀನಿವಾಸ್‌, ಸೋಮೇಗೌಡ, ಚಂದ್ರಶೇಖರ್‌,ಪ್ರಸನ್ನಕುಮಾರ್‌, ಗ್ರಾಮದ ಮುಖಂಡರುಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next