Advertisement
ಗ್ರಾಪಂ ಆರ್ಥಿಕವಾಗಿ ಸಬಲ: ಗ್ರಾಮಾಂತರ ಜಿಲ್ಲೆಯಲ್ಲಿ ಬೂದಿಹಾಳ್ ಗ್ರಾಮಪಂಚಾ ಯಿ ತಿ ಆರ್ಥಿಕವಾಗಿ ಸಬಲವಾಗಿರುವ ಎರಡನೇ ಪಂಚಾಯಿತಿಯಾಗಿದ್ದು ಸರ್ಕಾರದ ಅನುದಾನ ಹಾಗೂ ಖಾಸಗಿ ಕಂಪನಿಗಳ ಸಿಎಸ್‌ಆರ್ ಹಣವನ್ನು ಉಪಯುಕ್ತವಾಗಿ ಬಳಸಿಕೊಂಡು 20 ಕೋಟಿ ವೆಚ್ಚದಲ್ಲಿ 16 ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಜೊತೆಗೆ 2 ಕೋಟಿ ವೆಚ್ಚದಲ್ಲಿ ಬೃಹತ್ ಗ್ರಾಮಸೌಧ ನಿರ್ಮಾಣ ಮಾಡಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
Related Articles
Advertisement
ಚೆಕ್‌ವಿತರಣೆ: ಉತ್ತರ ಕರ್ನಾಟಕದ ಜಲಪ್ರಳಯಕ್ಕೊಳ್ಳಗಾಗಿರುವ ಜನರಿಗೆ ಸಹಕರಿಸುವ ಸಲುವಾಗಿ ಕಾರ್ಯಕ್ರಮದಲ್ಲಿ ಪಂಚಾಯಿತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ.ಗಳ ಸಹಾಯಧನದ ಚೆಕ್‌ಅನ್ನು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅವರಿಗೆ ಹಸ್ತಾಂತರಿಸಲಾಯಿತು.
ಮನವಿ: ಗ್ರಾಮ ಪಂಚಾಯಿತಿ ಕೇಂದ್ರ ಗ್ರಾಮವಾಗಿರುವ ಬೂದಿಹಾಳ್ ಗ್ರಾಮದ ವೇಣು ಹಾಗೂ ಜಿ.ಸಿದ್ದರಾಜು ಮತ್ತು ಯುವಕ ತಂಡದವರು ಪಂಚಾಯಿತಿ ಹಳೆಯ ಕಟ್ಟಡವನ್ನು ವ್ಯಾಯಾಮ ಶಾಲೆಯನ್ನಾಗಿ ಮಾಡಿಕೊಡುವಂತೆ ಪಂಚಾಯಿತಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧ್ಯಕ್ಷ ಎಂ.ಕೆ.ನಾಗರಾಜು ವ್ಯಾಯಾಮಶಾಲೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು.
ಗ್ರಾಮವಾಣಿ ಬಿಡುಗಡೆ: ಬೂದಿಹಾಳ್ ಗ್ರಾಮದ ಇತಿಹಾಸ, ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮಾಹಿತಿಯುಳ್ಳ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಸಚಿತ್ರಮಾಹಿತಿ, ಅಭಿವೃದ್ಧಿಯ ಸಮಗ್ರ ಮಾಹಿತಿಯುಳ್ಳ ಕಿರು ಸ್ಮರಣ ಸಂಚಿಕೆಯನ್ನು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್.ಲತಾ, ಪಿಡಿಒ ಡಿ.ಪದ್ಮನಾಭ್ ಬಿಡುಗಡೆಗೊಳಿಸಿದರು.
ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀನಂಜಾವಧೂತಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಬಿಎಂಎಲ್.ಕಾಂತರಾಜು, ಎಸ್.ರವಿ, ಅ.ದೇವೇಗೌಡ. ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ಮಾಜಿಪ್ರದಾನ ಬಿ.ಕರಿವರದಯ್ಯ, ಎಪಿಎಂಸಿ ನಿರ್ದೇಶಕ ವಿ.ಗೋವಿಂದರಾಜು, ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸಿಇಒ ಆರ್.ಲತಾ, ತಾಪಂ ಇಒ ಡಾ.ಎಂ.ಬಿ.ನಾಗರಾಜ್, ತಹಶೀಲ್ದಾರ್ ಕೆಎನ್.ರಾಜಶೇಖರ್, ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಬಿ.ರಂಗನಾಥ್, ಗ್ರಾಪಂ ಉಪಾಧ್ಯಕ್ಷ ಶೋಭಾ ನರಸಿಂಹಮೂರ್ತಿ, ಸದಸ್ಯರಾದ ಕೆ.ಜಿ.ವೆಂಕಟೇಶ್, ಬಿ.ಟಿ.ಮಂಜುನಾಥ್‌ಗೌಡ, ಮಂಜಮ್ಮ ಮಾರೇಗೌಡ, ಮುನಿರಾಜು, ಮಂಜುಳಾ ಸೇರಿದಂತೆ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.