Advertisement

ಚಲನಶೀಲತೆಯಿಂದ ಖನ್ನತೆ ದೂರ

12:57 PM Apr 08, 2017 | |

ದಾವಣಗೆರೆ: ಮನುಷ್ಯ ಚಲನಶೀಲ ಬದುಕು ಕಟ್ಟಿಕೊಂಡರೆ ಮಾನಸಿಕ ಸಮಸ್ಯೆ ಕಾಡುವುದಿಲ್ಲ, ಜಡವಾದಾಗ ಖನ್ನತೆ ಮತ್ತಿತರೆ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾನೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದರು. 

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣ ಬಳಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಲನಶೀಲ ಬದುಕು ಮಾನಸಿಕ ರೋಗಗಳಿಂದ ಮುಕ್ತವಾಗಲು ಇರುವ ಉತ್ತಮ ಮಾರ್ಗ ಎಂದರು. 

ಮಾನಸಿಕ ಆರೋಗ್ಯ ವಿಭಾಗದ ಡಾ| ದಯಾನಂದ್‌ ಸಾಗರ್‌ ಮಾತನಾಡಿ, ಮನಷ್ಯರು ಸದಾ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕುತ್ತಾರೆ. ದಿನವಿಡೀ ಬೇಜಾರು, ಸುಸ್ತು, ಯಾವುದೇ ಕೆಲಸದಲ್ಲಿ ನಿರಾಸಕ್ತಿ, ಆತ್ಮಹತ್ಯೆ ಪ್ರವೃತ್ತಿ, ಜೀವನವೇ ಬೇಡವೆಂಬ ಭಾವ ಎರಡು ವಾರಗಳಿಗಿಂತ ಹೆಚ್ಚಾಗಿ ಇದ್ದರೆ ಖನ್ನತೆಗೆ ಒಳಗಾಗಿದ್ದಾರೆಂದು ಹೇಳಬಹುದು ಎಂದು ತಿಳಿಸಿದರು. 

ಸಾಮಾನ್ಯವಾಗಿ ನಾವು ಒತ್ತಡಕ್ಕೊಳಗಾದಾಗ ಬೇರೆಯವರಲ್ಲಿ ಮಾತಾಡಿ ಹಂಚಿಕೊಂಡರೆ ಒತ್ತಡ ಕಡಿಮೆಯಾಗುತ್ತದೆ. ಅದೇ ರೀತಿ ಖನ್ನತೆ ಬಗ್ಗೆ ಸಂಬಂಧಿಧಿಸಿದ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಣಾಧಿಕಾರಿ ಡಾ| ತ್ರಿಪುಲಾಂಬ, ಚಿಗಟೇರಿ ಜಿಲ್ಲಾಸ್ಪತ್ರೆಯ ಅಧಿಧೀಕ್ಷಕಿ ಡಾ| ನೀಲಾಂಬಿಕಾ, ಡಿವೈಎಸ್‌ಪಿ ಅಶೋಕ್‌ ಕುಮಾರ್‌, ಜಿಲ್ಲಾ ಕ್ಷಯರೋಗ ಅಧಿಕಾರಿ  ಡಾ| ಜಿ.ಡಿ. ರಾಘವನ್‌, ಆರ್‌ಸಿಎಚ್‌ಒ ಡಾ| ಶಿವಕುಮಾರ್‌, ಡಾ| ಸರೋಜಾಬಾಯಿ, ಜಿಲ್ಲಾ ಸರ್ವೇಕ್ಷಣಾಧಿಧಿಕಾರಿ ಡಾ| ಗಂಗಾಧರ್‌ ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next