Advertisement

ಮೊಬೈಲ್‌, ಟಿವಿಗಳಿಂದ ದೂರವಿರಲಿ ಮಕ್ಕಳು

12:00 PM Feb 26, 2017 | Team Udayavani |

ಯಲಹಂಕ: “ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಸಲುವಾಗಿ ಅವರನ್ನು ಮೊಬೈಲ್‌ ಮತ್ತು ಟೀವಿಗಳಿಂದ ದೂರವಿಡಬೇಕಾದ ಅಗತ್ಯವಿದೆ,” ಎಂದು ಕವಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಬಾಗಲೂರಿನಲ್ಲಿ ನಡೆದ “ವಿಜಯಜ್ಯೋತಿ ಶಾಲಾ ವಾರ್ಷಿಕೋತ್ಸವ ಸ್ಪೂರ್ತಿ-2017’ಸಮಾರಂಭ ಉದ್ಘಾಟಿಸಿದ ಅವರು, “ಇಂದಿನ ಸಮಾಜದಲ್ಲಿ ಮಕ್ಕಳು ದೂರದರ್ಶನ ಹಾಗೂ ಮೊಬೈಲ್‌ಪೋನ್‌ಗಳಿಂದ ಹಾಳಾಗುತ್ತಿದ್ದಾರೆ. ಅವುಗಳಿಂದ ಮಕ್ಕಳನ್ನು ಪೋಷಕರು ದೂರವಿರಿಸಬೇಕು,” ಎಂದರು. 

ವೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಂ.ಎಚ್‌.ರುದ್ರಮುನಿ ಮಾತನಾಡಿ “ಮಕ್ಕಳು, ಶಿಕ್ಷಕರು ಹಾಗೂ ಪೋಷಕರ ನಡುವೆ ಸಾಮರಸ್ಯವಿದ್ದರೆ, ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ. ಶಿಕ್ಷಕರ ನಡೆ, ನುಡಿಗಳನ್ನು ಮಕ್ಕಳು ಪ್ರತಿನಿತ್ಯ ಗಮನಿಸುತ್ತಾರೆ. ಉತ್ತಮ ಶಿಕ್ಷಕರಿಂದ ಮಾತ್ರ ಬದಲಾವಣೆ ಸಾಧ್ಯ,” ಎಂದರು. ಇದೇ ವೇಳೆ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರರವರನ್ನು ಸನ್ಮಾನಿಸಿದರು. 

ನಗರಸಭೆ ಮಾಜಿ ಸದಸ್ಯ ಚಕ್ರಪಾಣಿ, ಬಾಗಲೂರು ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್‌,  ಗ್ರಾ. ಪಂ. ಅಧ್ಯಕ್ಷರಾದ ಮುನೇಗೌಡ, ಸಂಸ್ಕೆ ಅಧ್ಯಕ್ಷ ಮುನಿಕೆಂಪಣ್ಣ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next