Advertisement

ಐಟಿ ಕಂಪೆನಿ ಲೆಡೀಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌!;ಕಾಮುಕ ಅಂದರ್‌

04:29 PM Jun 05, 2017 | Team Udayavani |

ಬೆಂಗಳೂರು: ಇಲ್ಲಿನ ಎಚ್‌ಎಎಲ್‌ನ ಐಟಿ ಕಂಪೆನಿಯೊಂದರಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ನಡೆಸುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಎಚ್‌ಎಎಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಬಂಧಿತ ಆರೋಪಿ ಮಂಗಳೂರು ಮೂಲದ ಪರಮೇಶ್ವರ(24) ಎಂಬಾತನಾಗಿದ್ದು , ಐಟಿ ಕಂಪೆನಿಯ ಫ‌ುಡ್‌ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ.

ಶೌಚಾಲಯಲ್ಲಿ ಮೊಬೈಲ್‌ ಇಟ್ಟಿರುವುದನ್ನು ಗಮನಿಸಿದ ಮಹಿಳಾ ಟೆಕ್ಕಿ ಕೂಡಲೇ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದಳು. ಕೂಡಲೇ ಕಂಪೆನಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆಗಿಳಿದ ಪೊಲೀಸರು ಪರಮೇಶ್ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್‌ನಲ್ಲಿ ಕೆಲ ವಿಡಿಯೋಗಳು ಪತ್ತೆಯಾಗಿವೆ. ಆತ ವಾಸಿಸುತ್ತಿದ್ದ ರೂಮ್‌ ಕೂಡ ಪರಿಶೀಲನೆ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next