Advertisement

ಮೊಬೈಲ್‌ ಬಳಕೆ: ಶಿಕ್ಷಕಿ ವಿರುದ್ಧ ದೂರು ನೀಡಿದ 6ನೇ ತರಗತಿಯ ವಿದ್ಯಾರ್ಥಿನಿ

02:44 PM Apr 02, 2021 | Team Udayavani |

ಮಧುಗಿರಿ: ಶಾಲೆಯಲ್ಲಿ ಪಾಠ ಮಾಡುವ ಬದಲು ಮೊಬೈಲ್‌ನಲ್ಲಿಯೇ ಕಾಲ ಕಳೆಯುವ ಶಿಕ್ಷಕಿ ಮೇಲೆ ಅದೇ ಶಾಲೆಯ ವಿದ್ಯಾರ್ಥಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರಕ್ಕೆ ದೂರು ನೀಡಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಪುರವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವೈಷ್ಣವಿ ಪಿ.ಆರ್‌. ಶಿಕ್ಷಕಿ ಮೇಲೆ ದೂರು ನೀಡಿರುವ ವಿದ್ಯಾರ್ಥಿನಿ. ಶಾಲೆಯ ಸಮಯದಲ್ಲಿ ಶಿಕ್ಷಕಿಯರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು ನಮ್ಮ ಜೊತೆಗೆ ಬಿಡುತ್ತಾರೆ ಹಾಗೂ ಅವರ ಮಕ್ಕಳನ್ನು ಆಟವಾಡಿಸು ಅಂತ ಒತ್ತಡ ಹೇರುತ್ತಿದ್ದು, ಮೊಬೈಲ್‌ನಲ್ಲಿ ಕಾಲ ಕಳೆಯುತ್ತಾರೆ. ಇದರಿಂದ ತರಗತಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿನಿ ಅಳಲನ್ನು ತೋಡಿಕೊಂಡಿದ್ದಾರೆ.

ಪಾಠ, ಪ್ರವಚನ ಸರಿಯಾಗಿ ನಡೆಯುತ್ತಿಲ್ಲ: ಕೆಲವರು ಯಾವುದೋ ಸಂಸ್ಥೆಯಲ್ಲಿ ಸದಸ್ಯರಾಗಿದ್ದು, ಅವುಗಳ ವ್ಯವಹಾರವನ್ನೂ ಇಲ್ಲಿಯೇ ನಡೆಸುತ್ತಿದ್ದಾರೆ. ಇದರಿಂದಸರಿಯಾಗಿ ಪಾಠ ಪ್ರವಚನ ನಡೆಯದೆ ನಮಗೆತೊಂದರೆಯಾಗುತ್ತಿದೆ. ಇದಲ್ಲದೆ ಶಾಲೆಯ ಆವರಣದ ಹಿಂಭಾಗದಲ್ಲಿ ಸೀಮೆಜಾಲಿ ಹೆಚ್ಚಾಗಿ ಬೆಳೆದಿದ್ದು, ಹಾವುಗಳು ಕಾಣಿಸುತ್ತಿವೆ.  ಈ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತಂದು ನಮ್ಮ ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಸಂಸ್ಥೆಯ ಅಧ್ಯಕ್ಷಸಿದ್ದಲಿಂಗೇಗೌಡರಿಗೆ ಪತ್ರ ಬರೆದಿದ್ದಾರೆ.

ಅಧಿಕಾರಿಗಳಿಗೆ ಪತ್ರ: ಸದರಿ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿರುವ ಸಿದ್ದಲಿಂಗೇಗೌಡರು ಜಿಲ್ಲಾಧಿಕಾರಿ, ಜಿಪಂಸಿಇಒ, ಮಧುಗಿರಿ ಉಪವಿಭಾಗಾಧಿಕಾರಿ, ಡಿಡಿಪಿಐ ಹಾಗೂ ಬಿಇಒ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next